dtvkannada

'; } else { echo "Sorry! You are Blocked from seeing the Ads"; } ?>

ಲಿಸ್ಬನ್: ಪೋರ್ಚುಗಲ್ ನ ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಗಂಡು ಮಗುವನ್ನು ಕಳೆದುಕೊಂಡಿದ್ದಾರೆ. ನವಜಾತ ಮಗನ ಸಾವಿನ ದುಃಖವನ್ನು ರೊನಾಲ್ಡೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬವು ಗಂಡು ಮಗುವಿನ ಸಾವಿನಿಂದ ಬೇಸರದಲ್ಲಿದ್ದು, ಖಾಸಗಿತನದ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.
ರೊನಾಲ್ಡೊ ಮತ್ತು ಬಹುಕಾಲದ ಗೆಳತಿ ಜಾರ್ಜಿನಾ ಅವಳಿ ಶಿಶುಗಳಿಗೆ ಪೋಷಕರಾಗಲಿದ್ದಾರೆ ಎಂದು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದರು. ಆದರೆ ಸೋಮವಾರ ಪೋಸ್ಟ್‌ ಮಾಡಿರುವ ರೊನಾಲ್ಡೊ ಹೆಣ್ಣು ಮಗುವಿನ ಜನನವು ಮಗನನ್ನು ಕಳೆದುಕೊಂಡ ನೋವನ್ನು ನಿಭಾಯಿಸುವ ಶಕ್ತಿಯನ್ನು ನೀಡಿದೆ ಎಂದು ಹೇಳಿದ್ದಾರೆ.
ರೊನಾಲ್ಡೊ- ಜಾರ್ಜಿನಾ ದಂಪತಿಗೆ ಕ್ರಿಸ್ಟಿಯಾನೋ ಜೂನಿಯರ್, ಮಾಟಿಯೊ, ಇವಾ ಮತ್ತು ಅಲಾನಾ ಎಂಬ ನಾಲ್ವರು ಮಕ್ಕಳಿದ್ದಾರೆ.

'; } else { echo "Sorry! You are Blocked from seeing the Ads"; } ?>

“ಆಳವಾದ ದುಃಖದಿಂದ ನಮ್ಮ ಗಂಡು ಮಗು ತೀರಿಕೊಂಡಿದೆ ಎಂದು ಘೋಷಿಸಬೇಕಾಗಿದೆ. ಇದು ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣವನ್ನು ಸ್ವಲ್ಪ ಭರವಸೆ ಮತ್ತು ಸಂತೋಷದಿಂದ ಬದುಕಲು ನಮಗೆ ಶಕ್ತಿಯನ್ನು ನೀಡುತ್ತದೆ” ಎಂದು ರೊನಾಲ್ಡೊ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

View this post on Instagram

A post shared by Cristiano Ronaldo (@cristiano)

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!