';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಮಸೀದಿಯೊಳಗೆ ಹಿಂದು ದೇವರಿಗೆ ಸಂಭಂದಪಟ್ಟ ಶಿಲೆಯ ಕುರುಹುಗಳು ಇದೆಯೆಂದು ಆರೋಪಿಸಿ ನವೀಕರಣಕ್ಕೆ ಹಿಂದು ಸಂಘಟನೆಗಳು ಅಡ್ಡಿಪಡಿಸಿದ ಘಟನೆ ಮಂಗಳೂರು ಸಮೀಪದ ಮಳಲಿ ಎಂಬಲ್ಲಿ ನಡೆದಿದೆ.
ಪುರಾತನ ಕಾಲದ ಹಳೆಯ ಮಸೀದಿಯನ್ನು ಕೆಡವಿ ಹೊಸ ಮಸೀದಿ ನಿರ್ಮಿಸುವ ತೀರ್ಮಾನವನ್ನು ಕೈಗೊಂಡು ಅದರಂತೆ ಇಂದು ಹಳೆಯ ಮಸೀದಿಯನ್ನು ಕೆಡವುವ ಕೆಲಸ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ವಿಶ್ವ ಹಿಂದು ಪರಿಷತ್ ನಾಯಕರು ಹಾಗು ಹಿಂದು ಸಂಘಟನೆಯ ಕಾರ್ಯಕರ್ತರು ಮಸೀದಿಯೊಳಗೆ ಹಿಂದು ದೇವರ ಶಿಲೆಯ ಕುರುಹುಗಳಿವೆ ಎಂದು ಆರೋಪಿಸಿ ನವೀಕರಣ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಇದೀಗ ಸ್ತಳಕ್ಕೆ ತಹಶಿಲ್ದಾರ್ ಆಗಮಿಸಿ ನವೀಕರಣ ಕೆಲಸ ಮುಂದುವರಿಸದಂತೆ ತಡೆಯಾಜ್ಞೆ ನೀಡಿದ್ದು. ಅಹಿತಕರ ಘಟನೆ ನಡೆಯದಂತೆ ಪೋಲಿಸರು ಬಂದೋಬಸ್ತ್ ಏರ್ಪಡಿಸಿದ್ದಾರೆ ಎಂದು ತಿಳಿದುಬಂದಿದೆ.