';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೊಯಿಕ್ಕೋಡ್: ಚಿತ್ರಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ನಟಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ತನ್ನ ಬಾಡಿಗೆ ಮನೆಯಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದಿದೆ.
ಮೃತಪಟ್ಟ ದುರ್ದೈವಿ ಕಾಸರಗೋಡಿನ ಚೆರುವತ್ತೂರಿನ ಮೂಲದ ನಿವಾಸಿ ಸಹನಾ (20) ಎಂದು ತಿಳಿದು ಬಂದಿದೆ.
ಸಹನಾ ಸಾಜದ್ ಎಂಬವರನ್ನು ಒಂದೂವರೆ ವರ್ಷದ ಹಿಂದೆ ಮದುವೆ ಆಗಿದ್ದರು. ಆದರೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಹಿಂದೊಮ್ಮೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಹಾಗಾಗಿ ಆಕೆಯ ಸಾವಿನ ಬಗ್ಗೆ ಇದೀಗ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಗಂಡ ಸಾಜದ್‌ರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಹನಾ ಮೃತದೇಹ ಪತ್ತೆಯಾಗಿದೆಯೆಂದು ತಿಳಿದು ಬಂದಿದೆ.