ಪುತ್ತೂರು: ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ಇಂದು ಶುಭಾರಂಭಗೊಂಡಿತು.
ವಿ ಕೇರ್ ಪಾಲಿಕ್ಲಿನಿಕ್ ಇದರ ಉದ್ಘಾಟನಾ ಸಮಾರಂಭದ ಅಂಗವಾಗಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಸಂಸ್ಥೆಯ ಆಶ್ರಯದಲ್ಲಿ, ಕೆ. ಎಂ. ಸಿ. ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಬಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ 136 ನೇ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಈಗಾಗಲೇ ಕ್ಲಿನಿಕಲ್ ಲ್ಯಾಬ್, ಎಕ್ಸ್’ರೇ, ಇಸಿಜಿ ಸೌಲಭ್ಯವನ್ನು ಹೊಂದಿದ ವಿ ಕೇರ್ ಲ್ಯಾಬ್ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ನವೀಕರಣದೊಂದಿಗೆ ವಿ ಕೇರ್ ಪಾಲಿ ಕ್ಲಿನಿಕ್ ಉದ್ಘಾಟನೆಗೊಂಡಿತು.
ದುಃಆ ಆಶಿರ್ವಚನದೊಂದಿಗೆ ಉದ್ಘಾಟನೆ ಮಾಡಿದ
ಕಲ್ಲೇಗ ಜುಮ್ಮಾ ಮಸೀದಿ ಖತೀಬರಾದ ಸಿದ್ದೀಕ್ ಜಲಾಲಿ ಮಾತನಾಡಿ, ಸಂಸ್ಥೆಗೆ ಶುಭಹಾರೈಸಿದರು. ಆರೋಗ್ಯದಿಂದ ಕೂಡಿದ ಸಮಯದಲ್ಲಿ ಅನಾರೋಗ್ಯ ಬಂದೆರಗುವ ಮೊದಲು ನಶ್ವರ ಭೂಮಿಯಲ್ಲಿ ಇರುವಷ್ಟು ಕಾಲ ಶಾಶ್ವತವಾದ ಪರಲೋಕಕ್ಕೆ ಬೇಕಾದ ಸಮೃದ್ಧವಾದ ಸಂಪತ್ತನ್ನು ಸಮಾಜ ಸೇವೆಯ ಮೂಲಕ ಗಳಿಸಿರಿ. ಸ್ವಾರ್ಥ, ಅಸೂಯೆ,ನಂಜಿ, ಪಿತೂರಿ, ಮತ್ಸರ, ಎಲ್ಲವನ್ನೂ ತ್ಯಜಿಸಿರಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಪಿ.ಎನ್.ಕುಲಕರ್ಣಿ ವಹಿಸಿದ್ದರು. ಡಾ.ಕಾವ್ಯರಶ್ಮಿರಾವ್, ಡಾ.ಡಿ.ಕೆ.ಯದುರಾಜ್, ಡಾ.ಕೆ.ಅಶ್ವಿನ್ ಆಳ್ವ, ಕೆ.ಎಂ.ಸಿ. ವೈದ್ಯರಾದ ಶ್ರೀರಾಮ್, ಹಿರಿಯರಾದ ದಾವೂದ್ ಕೊಡಿಯಾಡಿ ಆಗಮಿಸಿ ಶುಭಹಾರೈಸಿದರು.
ವಿ ಕೇರ್ ಪಾಲಿಕ್ಲಿನಿಕ್ ವ್ಯವಸ್ಥಾಪಕರಾದ ನಾಸಿರ್, ಸಹಾಯಕ ಸಿಬ್ಬಂದಿ ಗಳಾದ ಮಮತ, ಶಾನಿಯಾ, ನಜೀಬಾ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ.ಸಿ.ರೋಡ್, ಶಿಬಿರ ಸಂಯೋಜಕ ಸಿರಾಜ್ ಉಲಾಯಿ ಬೆಟ್ಟು, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯ ನಿರ್ವಾಹಕ ನಝೀಬ್ ಪಡುಬಿದ್ರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.