ವಿಟ್ಲ: ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ, ಇದರ ಬ್ಯಾಂಕ್ ಖಾತೆಗಳನ್ನು ರಾಷ್ಟ್ರೀಯ ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಕ್ರಮದ ವಿರುದ್ಧ ಇಂದು ದೇಶಾಧ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆಯ ಭಾಗವಾಗಿ ವಿಟ್ಲ ಜಂಕ್ಷನ್’ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ವಿಟ್ಲ ವಲಯ ಅಧ್ಯಕ್ಷರಾದ ರಹೀಂ ಆಲಾಡಿ ವಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾ ವಿಟ್ಲ ವಲಯ ಸಮಿತಿ ಸದಸ್ಯರಾದ ಜನಾಬ್ ಸಿದ್ದೀಕ್ ಕಲ್ಲಡ್ಕ ಮಾತಾನಾಡಿ ರಾಷ್ಟ್ರೀಯ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರದ ಕೋಮುವಾದಿ ಸರಕಾರ ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ಸಡೆಸುವ ದಬ್ಬಾಳಿಕೆಯನ್ನು ಖಂಡಿಸಿದರು.
ರಾಜ್ಯ ಸಮಿತಿ ಸದಸ್ಯರಾದ ತುಪೈಲ್ ಅವರು ಮಾತನಾಡಿ ಸಂಘ ಪರಿವಾರ ಪ್ರೇರಿತ ಸಾವರ್ಕರ್ ಸಂತತಿಗಳಿಂದ ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಎಂಬ ಸಂಘಟನೆಯನ್ನು ಸಂಘಟನೆಯ ಕಟ್ಟ ಕಡೆಯ ಕಾರ್ಯಕರ್ತರು ಇರುವವರೆಗೂ ದಮನಿಸಲು ಸಾದ್ಯವಿಲ್ಲ ಎಂದರು.
ಪ್ರತಿಭಟನೆಯನಲ್ಲಿ ವಿಟ್ಲ ವಲಯ ಪ್ರಧಾನ ಕಾರ್ಯದರ್ಶಿಗಳಾದ ಹನೀಪ್ ಬೋಳಿಯಾರ್, ವಿಟ್ಲ ಡಿವಿಝನ್ ಅಧ್ಯಕ್ಷರಾದ ಶಾಫಿ ಮಾಳಿಗೆ, ಸಮಿತಿ ಸದಸ್ಯರಾದ ಮುಬಾರಕ್ ಕಾರಾಜೆ, ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ದಾಳಿಗೆ ಕುಮ್ಮಕ್ಕು ನಿಡುತ್ತಿರುವ ಅರ್ ಎಸ್ ಎಸ್, ಬಿಜೆಪಿ ವಿರುದ್ಧ ಘೋಷಣೆ ಕೂಗಲಾಯಿತು.
ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.