ಮಂಗಳೂರು: ತರಗತಿಗಳಲ್ಲಿ ಹಿಜಾಬ್ ವಿಚಾರ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಕರ್ನಾಟಕ ವಿರೋಧ ಪಕ್ಷದ ಉಪ ನಾಯಕ ಮಾಜಿ ಶಾಸಕ ಯು.ಟಿ ಖಾದರ್ ರವರ ಹೇಳಿಕೆ ಮುಸಲ್ಮಾನರೆಡೆಯಲ್ಲಿ ಇದೀಗ ಬಾರೀ ಸುದ್ದಿಯಾಗುತ್ತಿದೆ.
ಹಿಜಾಬ್ ವಿಚಾರವಾಗಿ ಮಂಗಳೂರು ವಿ,ವಿಯಲ್ಲಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಗಳು ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅನುಮತಿ ಕೋರಿದರು ವಿ,ವಿ ಅನುಮತಿ ನಿರಾಕರಿಸಿದೆ,
ಇದರ ಬೆನ್ನಲ್ಲೇ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಯು.ಟಿ ಖಾದರ್ ಹಿಜಾಬ್ ಗಾಗಿ ಪಟ್ಟು ಹಿಡಿಯುವವರು ವಿದೇಶಕ್ಕೆ ಹೋಗಲಿ ಗಲ್ಫ್ ರಾಷ್ಟ ಅಥವಾ ಪಾಕಿಸ್ತಾನಕ್ಕೆ ತೆರಳಲಿ ಆವಾಗ ಇಲ್ಲಿನ ಪರಿಸ್ಥಿತಿ ಅವರಿಗೆ ಅರ್ಥವಾಗುತ್ತದೆ ಎಂದು ಅವರು ಹೇಳಿದರು.
ಯು,ಟಿ,ಕೆ ಅವರ ಮಾತಿನ ಬೆನ್ನಲ್ಲೇ ಆಕ್ರೋಶಿತಗೊಂಡ ಮುಸ್ಲಿಂ ಯುವಕರು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಯು.ಟಿ.ಕೆ ಅವರನ್ನು ಕಾಳೆಲೆದಿದ್ದಾರೆ.
ಸಂಘ ಪರಿವಾರವನ್ನು ಮೆಚ್ಚಿಸದೇ ಬೇರೆ ಕಾರ್ಯವಿಲ್ಲ ಕಾದರ್ ರವರಿಗೆ ಮುಂಬರುವ ಮತದಾನದಲ್ಲಿ ಸೋಲುವ ಎಲ್ಲಾ ಲಕ್ಷಣ ಅವರಿಗೆ ನಿರ್ಮಾಣವಾಗಿದೆ ಇದೀಗ ಅದಕ್ಕಿರುವ ತಯಾರಿ ನಡೆಸುತ್ತಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಇದೇ ರೀತಿ ಹಲವಾರು ಕಮೆಂಟ್ಸ್ ಗಳ ಮೂಲಕ ವಿರೋಧ ಪಕ್ಷದ ಉಪ ನಾಯಕನನ್ನು ವಿದ್ಯಾರ್ಥಿಗಳು ಸಹಿತ ನೆಟ್ಟಿಗರು ಕಾಳೆಲೆದಿದೆ.
ಇದೀಗ ಹಿಜಾಬ್ ನ ಕುರಿತು ಮುಸ್ಲಿಂ ನಾಯಕನಾಗಿರುವ ಯು,ಟಿ ಖಾದರ್ ರವರು ಹೇಳಿದ ಮಾತು ಇದೀಗ ಬಾರೀ ಸುದ್ದಿ ಮಾಡುತ್ತಿದೆ.