ಸುಳ್ಯ: ಹಯಾತುಲ್ ಇಸ್ಲಾಂ ಮದ್ರಸ ಸುನ್ನಿ ಬಾಲ ಸಂಘ (SBS)2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಜೂನ್ 19 ರಂದು ಮದ್ರಸ ಸಭಾಂಗಣದಲ್ಲಿ ಮದ್ರಸ ಸದರ್ ಉಸ್ತಾದ್ ಶಾಹುಲ್ ಹಮೀದ್ ಸಖಾಫಿ ರವರ ಅಧಕ್ಷತೆಯಲ್ಲಿ ನಡೆಯಿತು.
ಮದ್ರಸ ಅಧ್ಯಾಪಕರಾದ ಯಾಕೂಬ್ ಸಅದಿ ರವರು ದುಃಆ ಮೂಲಕ ಚಾಲನೆ ನೀಡಿದರು. ಸಭೆಯನ್ನು ಸದರ್ ಉಸ್ತಾದ್ ಶಾಹುಲ್ ಹಮೀದ್ ಸಖಾಫಿ ರವರು ಉದ್ಘಾಟಿಸಿದರು.
ಅಧ್ಯಾಪಕರಾದ ನೌಫಲ್ ಹಿಮಮಿ ಸಖಾಫಿ ಸಭೆಯನ್ನು ಸ್ವಾಗತಿಸಿದರು. ಈ ವೇಳೆ 2022 -23 ನೇ ಸಾಲಿನ ನೂತನ ಸಮೀತಿಯ ಆಯ್ಕೆ ಮಾಡಲಾಯಿತು.
ಅಧಕ್ಷರಾಗಿ ಮುಹಮ್ಮದ್ ಹಾಶಿರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಝೀಲ್, ಕೋಶಾಧಿಕಾರಿಯಾಗಿ ಶಾನಿದ್ ರವರನ್ನು ಹಾಗೂ ಉಪಾಧ್ಯಕ್ಷರಾಗಿ ಇಯಾಝ್ ಇಬ್ರಾಹಿಂ, ಮುಹಮ್ಮದ್ ಅನ್ಸಾಫ್, ಮುಹಮ್ಮದ್ ರಾಫಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ಲಾ, ಇಯಾಸ್, ಅನೀಖ್ ಆಯ್ಕೆ ಮಾಡಲಾಯಿತು.
ಮದ್ರಸ ಮುಖ್ಯ ನಾಯಕನಾಗಿ ಫಹೀಮ್ ರವರನ್ನು ಆಯ್ಕೆ ಮಾಡಲಾಯಿತು. SBS ಸಂಚಾಲಕಾರಾಗಿ ನೌಫಲ್ ಹಿಮಮಿ ಸಖಾಫಿ ರವನ್ನು ನೇಮಿಸಲಾಯಿತು.
10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಗಳಿಸಿದ ವಿದ್ಯಾರ್ಥಿ ರಫಾನ ರವರನ್ನು ಜಮಾಅತ್ ಪ್ರಧಾನ ಕಾರ್ಯದರ್ಶಿಯಾದ ನಜೀಬ್ ಅಡ್ಕಾರು ರವರು ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮವನ್ನು ಧನ್ಯವಾದದ ಮೂಲಕ ಸಮಾಪ್ತಿಗೊಳಿಸಲಾಯಿತು.