ಪುತ್ತೂರು: ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಅಧೀನ ಸಂಸ್ಥೆ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅಧ್ಯಕ್ಷರಾಗಿ ಉದ್ಯಮಿ ಅಮ್ಜದ್ ಖಾನ್ ಪೋಲ್ಯ ಮತ್ತು ಉಪಾಧ್ಯಕ್ಷರಾಗಿ ಖ್ಯಾತ ಶಿಕ್ಷಣ ಪ್ರೇಮಿ ಮರ್ಹೂಂ ಮಮ್ಮುಞ ಹಾಜಿಯವರ ಪುತ್ರ ಶೇಖ್ ಅಬ್ದುಲ್ಲಾ ಅವರನ್ನು ಸೆಂಟರಿನಲ್ಲಿ ನಡೆದ CRDF ನ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಿ.ಆರ್.ಡಿ.ಎಪ್ ನ ಪದಾಧಿಕಾರಿಗಳಾದ ಶಮೀರ್ ಕಲ್ಲಾರೆ, ಮುನೀರ್ ವಿಟ್ಲ, ಸಂಶುದ್ದೀನ್ ಬೈರಿಕಟ್ಟೆ ಯವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸೆಂಟರಿನ ನೇತೃತ್ವದ ಜವಾಬ್ದಾರಿ ನೀಡಿ ಶುಭ ಹಾರೈಸಿದರು.

ಕಳೆದ ಒಂದು ವರ್ಷದ ಹಿಂದೆ ಆರಂಭವಾದ ಪುತ್ತೂರು ಕಮ್ಯೂನಿಟಿ ಸೆಂಟರ್ ಶೈಕ್ಷಣಿಕ ಜಾಗೃತಿ ಮತ್ತು ಉನ್ನತೀಕರಣಕ್ಕೆ ದುಡಿಯುತ್ತಾ ರಾಜ್ಯದಾದ್ಯಂತ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆ ಮತ್ತು ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಇವರೂ ಅಭಿಮಾನ ವ್ಯಕ್ತಪಡಿಸಿದ್ದರು. ಹಲವಾರು ಅಧಿಕಾರಿಗಳು, ಸಂಘ ಸಂಸ್ಥೆಗಳು ಕಮ್ಯೂನಿಟಿ ಸೆಂಟರ್ ನ ಮಾದರಿಯನ್ನು ಅಧ್ಯಯನ ಮಾಡಿ ಶ್ಲಾಘಿಸಿದ್ದವು. ವಿಶೇಷವಾಗಿ ಸಂಸ್ಥೆಯು ವೈಜ್ಞಾನಿಕ ರೀತಿಯಲ್ಲಿ ಶಿಕ್ಷಣದಲ್ಲಿ ಪರಿಣಾಮಕಾರಿ ಪ್ರಯೋಗಗಳನ್ನು ಮಾಡಿರುವುದು, ಅವುಗಳ ಮೂಲಕ ಈಗಾಗಲೇ 4 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ನೊಂದಾವಣಿ ಮಾಡಿರುವುದು ಕಡಿಮೆ ಅವಧಿಯ ದೊಡ್ಡ ಯಶಸ್ಸು ಎನ್ನಬಹುದು.
ಸಂಸ್ಥೆಯು ಈಗಾಗಲೇ ವಿಟ್ಲ, ಮಂಗಳೂರಿನಲ್ಲೂ ಸೆಂಟರ್ ತೆರೆದಿದ್ದು ಈ ಮೂಲಕ ವಿದ್ಯಾರ್ಥಿಗಳ ಮೌಲ್ಯಮಾಪನ, ಕೌನ್ಸಿಲಿಂಗ್, ಮೆಂಟರಿಂಗ್ ಉಚಿತವಾಗಿ ಮಾಡುತ್ತಿದೆ. ಸುಮಾರು 300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿರುವ ಸಂಸ್ಥೆಯಲ್ಲಿ ತಜ್ಞ ಕೌನ್ಸಿಲರ್ ಗಳು, ಮಾರ್ಗದರ್ಶಕರು ಇದ್ದು ಅವರೆಲ್ಲರೂ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ದುಡಿಯುತ್ತಿದ್ದಾರೆ. ಸಂಸ್ಥೆಯು ವಿದ್ಯಾರ್ಥಿಗಳ ಮೂಲಕ ಕಾಲ್ ಸೆಂಟರನ್ನು ನಿರ್ಮಿಸಿದ್ದು ಶಿಕ್ಷಣ, ತರಬೇತಿ ಮತ್ತು ವಿಕಸನ ಎಂಬ ಮಂತ್ರದೊಂದಿಗೆ ದುಡಿಯುತ್ತಿದೆ.
ಸಂಸ್ಥೆಯ ನೂತನ ಪಧಾದಿಕಾರಿಗಳಾಗಿ ಸತ್ತಾರ್ ವಳತ್ತಡ್ಕ, ಹನೀಫ್ ಪುತ್ತೂರು, ಇಮ್ತಿಯಾಝ್ ಪಾರ್ಲೆ ಅವರು ಆಯ್ಕೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಸೆಂಟರನ್ನು ಇನ್ನಷ್ಟೂ ಯಶಸ್ವಿ ಯೋಜನೆಯೊಂದಿಗೆ ಮುನ್ನಡೆಸಲು ತೀರ್ಮಾನಿಸಲಾಗಿದೆ.