ಚೆನ್ನೈ: ದೆವಸ್ಥಾನದ ವಠರಾದ ಭಾಗದಲ್ಲಿ ಸಾರ್ವಜನಿಕವಾಗಿ ಗಂಜಿ ಬೇಯಿಸುತ್ತಿದ್ದ ಸಂಧರ್ಭ ನತದೃಷ್ಟ ವ್ಯಕ್ತಿಯೊಬ್ಬರು ಪಾತ್ರೆಯೊಳಗೆ ಬಿದ್ದು ಸಾವನ್ನಪ್ಪಿದ ಅಪರೂಪದ ಘಟನೆ ಮಧುರೈನಲ್ಲಿ ನಡೆದಿದ್ದು,ಈ ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಭೀಕರ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಮುತ್ತುಕುಮಾರ್(49) ಎಂದು ತಿಳಿದು ಬಂದಿದೆ.
ಮಧುರೈನ ಪಜಂಗನಾಥಂ ಬಳಿಯ ಮುತ್ತು ಮಾರಿಯಮ್ಮಮ್ ದೇವಸ್ಥಾನದ ಭಕ್ತರಿಗಾಗಿ ದೊಡ್ಡ ಪಾತ್ರೆಯೊಂದರಲ್ಲಿ ಅನ್ನ ಬೇಯಿಸುತ್ತಿದ್ದು ಇದೇ ವೇಳೆ ಅಲ್ಲಿಯೇ ನಿಂತಿದ್ದ ಮುತ್ತು ಕುಮಾರ್ ಗೆ ಏಕಾಏಕಿ ತಲೆ ಸುತ್ತಿದ್ದು ತಕ್ಷಣಕ್ಕೆ ಒರಗಿಕೊಳ್ಳಲು ಆಧಾರವಾಗಿ ಏನೂ ಸಿಗದೆ ಗಂಜಿ ಬೇಯುತ್ತಿದ್ದ ಪಾತ್ರೆಗೆ ಹೋಗಿ ಒರಗಿ ನಿಂತಿದ್ದಾರೆ.
ಆದರೆ ವಿಧಿ ಬರಹ ಬೆರೆಯಾಗಿದ್ದು ತಾನು ಸುಧಾರಿಸಿಕೊಳ್ಳುವಷ್ಟರಲ್ಲಿ ಆಯ ತಪ್ಪಿ ಪಾತ್ರೆಯೊಳಗೆ ಬಿದ್ದಿದ್ದಾರೆ. ಪಾತ್ರೆಯೊಳಗೆ ಬಿದ್ದ ಬಳಿಕ ಎದ್ದೇಳಲು ಸಾಧ್ಯವಾಗದೇ ಕುದಿಯುತ್ತಿದ್ದ ನೀರಿನಲ್ಲಿ ಸಿಲುಕಿದ್ದಾರೆ. ಪಕ್ಕದಲ್ಲಿ ಸಾಕಷ್ಟು ಜನರಿದ್ದರೂ ತಕ್ಷಣದಲ್ಲಿ ಮುತ್ತುಕುಮಾರ್ ಅವರನ್ನು ಪಾತ್ರೆಯಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಭಾರೀ ದೇಹವನ್ನು ಹೊಂದಿದ್ದ ಮುತ್ತು ಕುಮಾರ್ ಅವರನ್ನು ಹೊರ ತೆಗೆಯಲು ತಕ್ಷಣದಲ್ಲಿ ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಅವರು ಕುದಿಯುತ್ತಿದ್ದ ಪಾತ್ರೆಯಲ್ಲಿ ಬೆಂದು ಹೋಗಿದ್ದಾರೆ.
ಈ ಘಟನೆಯು ಜುಲೈ 29ರಂದು ನಡೆದಿದ್ದು ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನೆಯ ಗಂಭಿರತೆಯ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ವೀಡಿಯೋ ನೋಡುವವರ ಮೈ ಜುಮ್ಮೆನಿಸುತ್ತಿದೆ.