ಪುತ್ತೂರು: ಚಾಲಕನಿಲ್ಲದ ಸಂದರ್ಭ ಪ್ರಯಾಣಿಕರು ತುಂಬಿದ್ದ ಬಸ್ಸೊಂದು ಏಕಾ ಏಕಿ ಹಿಂದಕ್ಕೆ ಚಲಿಸಿದ್ದು ವಿದ್ಯಾರ್ಥಿಯೊರ್ವನ ಸಮಯ ಪ್ರಜ್ಞೆಯಿಂದ ಉಂಟಾಗಬಹುದಾದ ಬಲು ದೊಡ್ಡ ಅಪಘಾತವನ್ನು ತಪ್ಪಿಸಿದ್ದಾನೆ.
ಬಾಲಕನ ಈ ಕಾರ್ಯಕ್ಕೆ ಪ್ರಯಾಣಿಕರು ಸೇರಿದಂತೆ ಎಲ್ಲೆಡೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಂಗಳವಾರ ಸಂಜೆ 4;25 ರ ಹೊತ್ತಿಗೆ ಉಪ್ಪಿನಂಗಡಿಯತ್ತ ತೆರಳಬೇಕಾದ ವಾಹನ ಸಂಖ್ಯೆ KA21-F0057 ನ ಎಕ್ಸ್ ಪ್ರೆಸ್ ಸರ್ಕಾರಿ ಬಸ್ಸು ಪುತ್ತೂರು ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ಇದ್ದಾಗ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕರಿಲ್ಲದ ಸಂದರ್ಭ ಬಸ್ಸು ಏಕಾ ಏಕಿ ಹಿಂದಕ್ಕೆ ಚಲಿಸಿದ್ದು ಪ್ರಯಾಣಿಕರೆಲ್ಲರೂ ಬೊಬ್ಬೆ ಹೊಡೆಯುತ್ತಿದ್ದಂತೆ ಚಾಲಕನ ಸೀಟಿನ ಹತ್ತಿರದ ಸೀಟಿನಲ್ಲಿದ್ದ ಸಿಝಾನ್ ಹಸನ್ ಎಂಬ ಬಾಲಕ ತಕ್ಷಣವೇ ಚಾಲಕನ ಸೀಟಿಗೆ ಜಿಗಿದು ಬ್ರೇಕ್ ಹಿಡಿದಿದ್ದು.
ಹಿಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ನಿಯಂತ್ರಿಸಿದ್ದಾನೆ.
ಯುವಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಬಲು ದೊಡ್ಡ ಅಪಘಾತವನ್ನು ಸಿಝಾನ್ ತಪ್ಪಿಸಿದ್ದಾನೆ.
ಯುವಕನ ಈ ನಡೆಗೆ ಪ್ರಯಾಣಿಕರು ಸೇರಿದಂತೆ ಎಲ್ಲೆಡೆ ಬಾರೀ ಪ್ರಶಂಸೆ ವ್ಯಕ್ತವಾಗಿದ್ದು.
ಹಲವು ಜೀವಗಳನ್ನುಳಿಸಿದ ಆಪತ್ಬಾಂಧವನಾಗಿದ್ದಾನೆ.
ಡಿ.ಟಿವಿ ಕನ್ನಡದ ಜೊತೆ ಮಾತನಾಡಿದ ವಿದ್ಯಾರ್ಥಿ ಸಿಝಾನ್ ಮೈನಾ ಅಷ್ಟು ಜೀವಗಳು ಬಸ್ಸುಗಳಲ್ಲಿರುವಾಗ
ಹ್ಯಾಂಡ್ ಬ್ರೇಕ್ ಎಳೆಯದೇ ಬಸ್ಸು ನಿಲ್ಲಿಸಿ ಹೋಗಿದ್ದು ಬಸ್ಸು ಚಾಲಕನ ತಪ್ಪು.
ಎಷ್ಟೇ ತುರ್ತಾಗಿದ್ದರು ಪ್ರತಿಯೊಬ್ಬ ಚಾಲಕನು ಇವುಗಳ ಬಗ್ಗೆ ಗಮನವಹಿಸಬೇಕು ಎಂದು ಹೇಳಿದ್ದಾನೆ.
ಇನ್ನು ತಂದೆಯ ಜೊತೆ ಕಾರು ಕಲಿತ ಸಿಝಾನ್ ಗೆ ಬಸ್ಸಿನ ಬ್ರೇಕ್ ಹಿಡಿಯಲು ಸಾಧ್ಯವಾಯಿತು ಎಂದು ಹೇಳುತ್ತಾನೆ.
ಯುವಕನ ಈ ಸಮಯ ಪ್ರಜ್ಞೆಗೆ ಒಂದು ಸಲಾಂ ಹೇಳಲೇ ಬೇಕು.
ಸಿಝಾನ್ ಹಸನ್ ಪುತ್ತೂರು ಸಂತ ಫಿಲೋಮಿನ ಪಿ.ಯು ಕಾಲೇಜಿನ ಪ್ರಥಮ ECBA ವಿದ್ಯಾರ್ಥಿ
ಈತ ಉಪ್ಪಿನಂಗಡಿಯ ಉದ್ಯಮಿ ಮೈನಾ ಕ್ಲೋತ್ ಸೆಂಟರ್ ಮಾಲಕ ಸಲಾಂ ಮೈನಾ ಇವರ ಪುತ್ರ.