ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕಾರು ಚಾಲಕ ನವೀನ್ ರವರು ಬಂಟ್ವಾಳ ಠಾಣೆಗೆ ನೀಡಿದ ದೂರಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಾರು ಸೈಡು ಕೊಡುವ ವಿಚಾರದಲ್ಲಿ ನನಗೂ ಶಾಸಕರ ಕಾರು ಚಾಲಕನಿಗೆ ಮಾತುಕತೆಯಾಗಿದೆ ಅಷ್ಟೇ ಎಂದು ಮತ್ತೋರ್ವ ಕಾರು ಚಾಲಕ ಫಲ್ನಿರ್ ನಿವಾಸಿ ರಿಯಾಝ್(38) ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಶಾಸಕರ ಮೇಲೆ ದಾಳಿಗೆ ಯತ್ನ ನಡೆದಿದೆ ಎಂಬ ಮಾಹಿತಿ ಬಗ್ಗೆ ಅನ್ವೇಷಿಸಿ ರಿಯಾಝ್ ರವರನ್ನು ಬಂಧಿಸಿದ್ದು, ಘಟನೆ ವೇಳೆ ಇದ್ದ ಸ್ಕಾರ್ಪಿಯೋ ಕಾರನ್ನು ಕೂಡ ವಶಕ್ಕೆ ಪಡೆದು ಕೊಳ್ಳಲಾಗಿದೆ.
ರಿಯಾಝ್ ನಿಗೆ ಪೂರ್ವ ಹಿನ್ನಲೆ ಕ್ರಿಮಿನಲ್ ಇಲ್ಲ ಇದೊಂದು ಘಟನೆ ಮಾತ್ರ ಅವನ ಬಗ್ಗೆ ಕೇಸಿರುವುದು ಕಾರಿನಲ್ಲಿ ಯಾವುದೇ ಆಯುಧ ಪತ್ತೆಯಾಗಿಲ್ಲ ಇನ್ನೂ ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ತನ್ನ ವಾಹನವನ್ನು ಮುಂದೆ ಹೋಗಲು ಬಿಟ್ಟಿಲ್ಲ ಆ ಕಾರಣಕ್ಕೆ ಪೂಂಜಾರ ಕಾರಿನ ಚಾಲಕನ ಬಳಿ ಜಗಳ ನಡೆದಿದೆ ಎನ್ನಲಾಗಿದೆ.