ಉತ್ತರಪ್ರದೇಶ: ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್ಸೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಅಡಗಿ ಕುಳಿತ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.

ಶಾಲಾ ಬಸ್ ನಲ್ಲಿ ರಾಯ್ ಬರೇಲಿಯ ರಿಯಾನ್ ಪಬ್ಲಿಕ್ ಸ್ಕೂಲ್ನ ಬಸ್ನ ಸೀಟಿನ ಕೆಳಗೆ ಈ ಬೃಹತ್ ಗಾತ್ರದ ಹೆಬ್ಬಾವು ಕುಳಿತಿದ್ದ ದೃಶ್ಯ ಕಂಡು ಬಂದಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹೆಬ್ಬಾವನ್ನು ಬಸ್ನಿಂದ ಹೊರಕ್ಕೆ ತೆಗೆದು ರಕ್ಷಣೆ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವೀಡಿಯೊದಲ್ಲಿ ಅಧಿಕಾರಿಯೊಬ್ಬರು ಶಾಲಾ ಬಸ್ಸಿನ ಕೆಳಗಿನಿಂದ ಹೆಬ್ಬಾವನ್ನು ಎಳೆಯುತ್ತಿರುವುದನ್ನು ಕಾಣಲು ಸಾಧಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸಿಕ್ಕಿಬಿದ್ದ ಹೆಬ್ಬಾವಿನ ತೂಕ ಸುಮಾರು 80 ಕೆಜಿ ಮತ್ತು ಅದರ ಉದ್ದ 11ವರೆ ಅಡಿ ಎಂದು ತಿಳಿಸಿದ್ದು ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡಲಾಗಿದೆ.
ಅದೃಷ್ಟವಶಾತ್ ಭಾನುವಾರವಾದ್ದರಿಂದ ಶಾಲೆ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.