ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಮೀಲಾದ್ ಪ್ರಯುಕ್ತ ನಡೆದ ಪ್ರವಾದಿ(ಸ.ಅ)ರವರ ಪ್ರೇಮ ಕಾವ್ಯಗಳ ಗೊಂಚಲು ಬರ್ದಾ ಮಜ್ಲಿಸ್ ಕಾರ್ಯಕ್ರಮವು ಸೂರಿಕುಮೇರು ಜಂಕ್ಷನ್ ಬಳಿ ನಡೆಯಿತು.ಜಅಫರ್ ಸಅದಿ ಪಳ್ಳತ್ತೂರು ನೇತೃತ್ವದ ಮಿಶ್ಕಾತುಲ್ ಮದೀನಾ ತಂಡವು ಬುರ್ದಾ ಆಲಾಪನೆ ನಡೆಸಿತು.

ಕಾರ್ಯಕ್ರಮವನ್ನು ದುಆ ದೊಂದಿಗೆ ಆರಂಭಿಸಿದ ಉಡುಪಿ ಚಿಕ್ಕಮಗಳೂರು ಹಾಸನ ಮತ್ತು ದಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರವಾದಿ ಪ್ರೇಮವು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಹೃದಯದಲ್ಲಿ ಪ್ರಕಟಗೊಳ್ಳಬೇಕು ಅದು ಯಾವುದೇ ಒಂದು ಸಂಘಟನೆಗೆ ಸೀಮಿತವಾಗಬೇಕಾದ ಕಾರ್ಯ ಅಲ್ಲ ಎಂದರು,

ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ಖತೀಬ್ ಇಸ್ಮಾಯಿಲ್ ಆಸಿಫ್ ಹನೀಫಿ ಉದ್ಘಾಟಿಸಿದರು,ಮುಖ್ಯ ಪ್ರಭಾಷಣ ನಡೆಸಿದ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ಮಾತನಾಡಿ,ಪ್ರವಾದಿ(ಸ.ಅ) ರವರ ಜನನದಲ್ಲಿ ಇಬ್ಲೀಸನು ದುಖಿಸಿ ಅತ್ತಿದ್ದನು ನಾವು ಅವನಂತಾಗಬಾರದು ನಾವು ಸಂತೋಷ ವ್ಯಕ್ತಪಡಿಸಬೇಕು ಎಂದರು,ವೇದಿಕೆಯಲ್ಲಿ, ಸೂರಿಕುಮೇರು ಮಸೀದಿ ಅಧ್ಯಕ್ಷ ಮೂಸಾ ಕರೀಂ ಮಾಣಿ,ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಇಬ್ರಾಹಿಂ ಸಅದಿ ಮಾಣಿ,ಸ್ವದಕತುಲ್ಲಾಹ್ ನದ್ವಿ ಮಾಣಿ,ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ,ಅಬ್ದುಲ್ ರಝಾಕ್ ಮದನಿ ಮಂಜನಾಡಿ,ಯೂಸುಫ್ ಹಾಜಿ ಸೂರಿಕುಮೇರು, ಸುಲೈಮಾನ್ ಸೂರಿಕುಮೇರು, ದಾವೂದ್ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಚೆಯರ್‌ಮೆನ್ ಹನೀಫ್ ಸಂಕ,ಅಧ್ಯಕ್ಷ ಮುಬಶ್ಶಿರ್ ಸೂರಿಕುಮೇರು, ಕಾರ್ಯದರ್ಶಿ ಇಮ್ರಾನ್ ಸೂರಿಕುಮೇರು, ಹಸೈನ್ ಸಂಕ,ಅಬ್ದುಲ್ ಕರೀಂ ಸೂರಿಕುಮೇರು,ಅಝೀಂ ಸೂರಿಕುಮೇರು,ಇಬ್ರಾಹಿಂ ಮಾಣಿ,ಹಂಝ ಸೂರಿಕುಮೇರು,ಫಾರೂಕ್ ಶೂ ಪ್ಯಾಲೇಸ್ ಸೂರಿಕುಮೇರು,ಮುಂತಾದವರು ಉಪಸ್ಥಿತರಿದ್ದರು.

ಅಸರ್ ನಮಾಝ್ ಬಳಿಕ ಇಸಾಕ್ ಮಾಣಿ,ಅಶ್ರಫ್ ಸಖಾಫಿ ಸೂರಿಕುಮೇರು,ಉನೈಸ್ ಕಡಂಬಾರ್,ಅಜ್ಮಲ್ ಮಾಣಿ,ನೇತೃತ್ವ ದಲ್ಲಿ ಮಂಕೂಸ್ ಮೌಲಿದ್ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು,ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು ಸ್ವಾಗತಿಸಿದರು, ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.