ಸುರತ್ಕಲ್: ಟೋಲ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಟೋಲ್ ಮುತ್ತಿಗೆಗೆ ಜನ ಸಾಗರವೇ ಹರಿದು ಬಂದಿದ್ದು ಪೊಲೀಸರು ಟೋಲ್ ಸುತ್ತ ಸರ್ಪಗಾವಲು ಹಾಕಿದ್ದಾರೆ.

ಇನ್ನು ಪ್ರತಿಭಟನೆ ಕಿಚ್ಚು ಮತ್ತಷ್ಟು ಏರಿದ್ದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಆಕ್ರೋಶದ ಕಾವು ಏರುತ್ತಿದ್ದಂತೆ ಪೊಲೀಸರು 500 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದು ಹೋರಾಟ ಸಮಿತಿಯ ಚಳುವಳಿ ನಾಯಕರಾದ ಮುನೀರ್ ಕಾಟಿಪಳ್ಳ, ವಿನಯ್ ಕುಮಾರ್ ಸೊರಕೆ, ಪ್ರತಿಭಾ ಕುಳಾಯಿ, ಮಿಥುನ್ ರೈ ಸೇರಿದಂತೆ ಸುಮಾರು 500 ಮಂದಿ ಹೋರಾಟ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಂಧನವಾಗುತ್ತಿದ್ದಂತೆ ಹೋರಾಟಗಾರರ ಕಿಚ್ಚು ಮತ್ತಷ್ಟು ಏರುತ್ತಿದ್ದು ಪೊಲೀಸರು ಹಾಕಿದ ಬ್ಯಾರಿಕೆಡ್ ತುಳಿದು ಪ್ರತಿಭಟನಾಕಾರರು ಟೋಲ್ ಗೆ ಮುತ್ತಿಗೆ ಹಾಕಿದ್ದಾರೆ.ಮುಂದೇನು ಸಂಭವಿಸಬಹುದೆಂದು ಹೇಳಳಾಗದಷ್ಟು ರೊಚ್ಚಿಗೆದ್ದಿರುವ ನಾಗರಿಕರನ್ನು ಕಂಡು ಈಗಾಗಲೇ ಮಂಗಳೂರು ಕಮಿಷನರ್ ಪೊಲೀಸರಿಗೆ ಶಾಂತಿಯಿಂದ ವರ್ತಿಸಲು ಯಾವುದೇ ಸಂಧರ್ಭದಲ್ಲೂ ಪ್ರತಿಭಟನೆ ನಡೆಸುವವರ ಮೇಲೆ ತಾಳ್ಮೆ ಕಳೆದುಕೊಳ್ಳಬಾರದೆಂದು ಕರೆ ಕೊಟ್ಟಿದ್ದಾರೆ.