ಸಂಪ್ಯ: ಮಕ್ಕಳು ಎಂಬುದು ಅಲ್ಲಾಹು ನೀಡಿದ ಮಹಾ ಸಂಪತ್ತಾಗಿರುತ್ತದ್ದು ಅದೀಗ ಸಹಪಾಠಿ ಅಥವಾ ಸ್ನೇಹಿತರ ಹೆಸರಿನಲ್ಲಿ ಹಾಳಾಗುತ್ತಿದೆ. ಈ ಬಗ್ಗೆ ಪೋಷಕರು ಬಾರಿ ಜಾಗೃತಿ ವಹಿಸಬೇಕೆಂದು ಸುನ್ನೀ ಜಂ-ಇಯ್ಯತ್ತುಲ್ ಉಲಮಾ ಜಿಲ್ಲಾಧ್ಯಕ್ಷರಾದ ಮುಹಮ್ಮದಲೀ ಫೈಝಿ ಬಾಳೆಪುಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಒಂಬತ್ತು ದಶಕಗಳ ಕಾಲ ನಮ್ಮ ಜಿಲ್ಲಾ ಕೇಂದ್ರವಾದ ಉಳ್ಳಾಲದಲ್ಲಿ ಸೇವೆ ಸಲ್ಲಿಸಿ ನಮ್ಮಿಂದಗಲಿದ ಶೈಖುನಾ ತಾಜುಲ್ ಉಲಮಾ ರವರ ಜೀವನ ಚರಿತ್ರೆಯನ್ನು ಚುಟುಕಾಗಿ ವಿವರಿಸಿದ ಅವರು ಸಜ್ಜನರ ಪಾದ ಹಿಂಬಾಲಿಸಿ ಜೀವನ ಧನ್ಯಗೊಳಿಸಲು ಅವರು ಕರೆ ನೀಡಿದರು. ಸಂಪ್ಯ ಬ್ರಾಂಚ್ ಎಸ್.ವೈ.ಎಸ್ ಹಾಗೂ ಯೂನಿಟ್ ಎಸ್ಸೆಸ್ಸೆಫ್ ಜಂಟಿಯಾಗಿ ಆಯೋಜಿಸಿದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಯೂನಿಟ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಎಸ್.ವೈ.ಎಸ್ ಸಂಪ್ಯ ಬ್ರಾಂಚ್ ಅಧ್ಯಕ್ಷರಾದ ಅಬ್ದುರ್ರಝಾಖ್ ವಾಗ್ಲೆ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಕಾರ್ಯಕ್ರಮವನ್ನು ಕೆ.ಸಿ.ಎಫ್. ನಾಯಕರಾದ ಅಬ್ದುರ್ರಶೀದ್ ಮದನಿಯವರು ಉದ್ಘಾಟಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ತಾಜುಲ್ ಉಲಮಾ ಮೌಲಿದ್ ಪಾರಾಯಣವನ್ನು ಕೆ.ಸಿ.ಎಫ್. ಅಬುಧಾಬಿ ಝೋನ್ ನಾಯಕರಾದ ಮೂಸಾ ಮದನಿ ರವರ ನೇತೃತ್ವದಲ್ಲಿ ನಡೆಸಲಾಯಿತು. ಬಳಿಕ ನಡೆದ ಯೂನಿಟ್ ಕಾನ್ಫರೆನ್ಸ್ ನಲ್ಲಿ ಯೂನಿಟ್ ವ್ಯಾಪ್ತಿಯ ಸರಿಸುಮಾರು ಎಪ್ಪತ್ತರಷ್ಟು ವಿದ್ಯಾರ್ಥಿಗಳು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ಪುತ್ತೂರು ಸೆಂಟರ್ ಅಧ್ಯಕ್ಷರಾದ ಅಬೂ ಶಝಾ ಅಬ್ದುರ್ರಝಾಖ್ ಖಾಸಿಮಿ ಕೂರ್ನಡ್ಕ, ಸೆಂಟರ್ ನಾಯಕರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಸೆಂಟ್ಯಾರು, ಎಸ್.ವೈ.ಎಸ್. ನಾಯಕರಾದ ಇಬ್ರಾಹಿಂ ವಾಗ್ಲೆ, ಅಬೂಬಕರ್ ಹಾಜಿ, ಸಿ. ಎಂ. ಅಬ್ದುಲ್ಲಾ ಮುಸ್ಲಿಯಾರ್ ಸೆಂಟ್ಯಾರು, ಎ.ಪಿ.ಅಬೂಬಕರ್, ಮುಹಮ್ಮದ್ ಮದನಿ ಕಮ್ಮಾಡಿ, ಅಬ್ದುಲ್ ಜಬ್ಬಾರ್ ವಾಗ್ಲೆ, ಯಾಸೀನ್ ಸಅದಿ ವಿಟ್ಲ, ಅಶ್ರಫ್ ಕಲ್ಲರ್ಪೆ, ಅಝೀಝ್ ಕಲ್ಲರ್ಪೆ, ಎಸ್.ಎಸ್. ಶೆರೀಫ್, ಎಸ್ಸೆಸ್ಸೆಫ್ ನಾಯಕರಾದ ಬಿ.ಕೆ. ನೌಫಲ್, ರಾಝಿಖ್ ಕಲ್ಲರ್ಪೆ, ಮುಸ್ತಫ ವಾಗ್ಲೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಾಥ್ ನೀಡಿ ಸಹಕರಿಸಿದ ಕೆ.ಸಿ.ಎಫ್ ನಾಯಕರನ್ನು ಹಾಗೂ ಬಾಳೆಪುಣಿ ಉಸ್ತಾದರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ ನೀಡಿ ಪ್ರೋತ್ಸಾಹಿಸಲಾಯಿತು..
ಎಸ್ಸೆಸ್ಸೆಫ್ ಯೂನಿಟ್ ಅಧ್ಯಕ್ಷರಾದ ಬಿ.ಕೆ. ಯಾಸೀನ್ ಅಹ್ಸನಿ ಸ್ವಾಗತಿಸಿ, ಕೊಂಬಾಳಿ ಝುಹುರಿ ವಂದಿಸಿದರು. ಅಬ್ದುಲ್ ಹಮೀದ್ (ಅಮ್ಮಿ) ಕಾರ್ಯಕ್ರಮ ನಿರೂಪಿಸಿದರು.