ಮಂಗಳೂರು: ಸಂಪಾದಿಸಿದ ಸಂಪತ್ತನ್ನು ತಮ್ಮ ಖಾತೆಗೆ ಜಮಾ ಮಾಡದೇ ಅಲ್ಪವನ್ನಾದರೂ ಬಡವರಿಗೆ,ಅನಾಥರಿಗೆ, ನಿರ್ಗತಿಕರಿಗೆ ವಿನಿಯೋಗಿಸಿ ಬದುಕಲು ಪ್ರಯತ್ನ ಪಟ್ಟಲ್ಲಿ ಬದುಕು ಸಾರ್ಥಕತೆ ಕಾಣಲು ಸಾದ್ಯ ಎಂದು ಕೆನರಾ ಇಂಡಸ್ಟ್ರಿಯಲ್ ಅಸೋಸಿಯೇಷನ್ ಇದರ ಅದ್ಯಕ್ಷರಾದ ಅನಂತೇಶ್ ಪ್ರಭು ಅಭಿಪ್ರಾಯ ಪಟ್ಟರು
ಅವರು ಇಂದು ಬೈಕಂಪಾಡಿ ಗುರುಚರಣ್ ಇಂಡಸ್ಟ್ರೀಸ್, ಹಾಗೂ
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ ಜಂಟಿ ಆಶ್ರಯದಲ್ಲಿ
ಕೆ. ಎಂ. ಸಿ. ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಯೋಗದೊಂದಿಗೆ
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ 154ನೇಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್ ಮಾತನಾಡಿ, ಯುವಕರ ಚಿಂತನೆ,ಯೋಚನೆ, ಯೋಜನೆ,ಸಮಾಜಮುಖಿ ಕಾರ್ಯಕ್ರಮ ಸಂಘಟಿಸುವುದರಲ್ಲಿ ಆಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೆನರಾ ಪ್ಲಾಸ್ಟಿಕ್ ಅಸೋಸಿಯೇಷನ್ ಇದರ ಅದ್ಯಕ್ಷರಾದ ಬಿ.ಎ.ನಝೀರ್, ಪ್ಲಾಮಾ ಪ್ಲಾಸ್ಟಿಕ್ ಮಾಲೀಕರಾದ ಸುರೇಶ್, ಕೆ.ಯಂ.ಸಿ.ಆಸ್ಪತ್ರೆಯ ವೈದ್ಯರಾದ ಶಿಶಿರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗುರುಚರಣ್ ಇಂಡಸ್ಟ್ರೀಸ್ ಇದರ ಮಾಲಕರಾದ ಜಯಕರ್ ಶೆಟ್ಟಿಗಾರ್ ಅವರನ್ನು ಸನ್ಮಾನ ಮಾಡಲಾಯಿತು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ ಸ್ವಾಗತಿಸಿದರು. ಕೋಶಾಧಿಕಾರಿ ಸತ್ತಾರ್ ಪುತ್ತೂರು ಪ್ರಸ್ತಾಪಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.