dtvkannada

'; } else { echo "Sorry! You are Blocked from seeing the Ads"; } ?>

ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಂದು 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಸಾಕಷ್ಟು ವೈಫಲ್ಯಗಳನ್ನು ಎದುರಿಸಿ ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿಗೆ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಠಿಣ ಪರಿಶ್ರಮ, ಕೆಚ್ಚೆದೆಯ ನಡೆ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟರ್​ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಬ್ಯಾಟ್​ನಿಂದ ನಿರೀಕ್ಷೆಗೆ ತಕ್ಕಂತೆ ರನ್ ಬರುತ್ತಿರಲಿಲ್ಲ. ಆದರೆ, ಈ ವರ್ಷ ಕೊಹ್ಲಿ ತಮ್ಮ ಹಳೆಯ ಖದರ್​ಗೆ ಮರಳಿದ್ದು ಶತಕದ ಬರ ನೀಗಿಸುವ ಜೊತೆ ಫಾರ್ಮ್​ಗೆ ಬಂದು ಸದ್ಯ ಸಾಗುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022 (T20 World Cup) ರಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಮತ್ತು ತಾಯಿ ಸರೋಜ್ ಕೊಹ್ಲಿ. ಕೊಹ್ಲಿ ಪ್ರಾರಂಭಿಕ ದಿನಗಳಲ್ಲಿ ಕೋಚಿಂಗ್ ರಾಜ್ಕುಮಾರ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು. 2008ರಲ್ಲಿ 19 ವರ್ಷದ ವಯೋಮಿತಿಯ ವಿಶ್ವಕಪ್​ನಲ್ಲಿ ತನ್ನ ನಾಯಕತ್ವದಲ್ಲಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿಸಿದ ಕೊಹ್ಲಿ ನಂತರ ನೇರವಾಗಿ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ನೀಡಿದ್ದರು.

'; } else { echo "Sorry! You are Blocked from seeing the Ads"; } ?>

ತಮ್ಮ ಕವರ್ ಡ್ರೈವ್, ಕ್ಲಾಸಿಕ್‌ ಹೊಡೆತಗಳಿಗೆ ಹೆಸರುವಾಸಿಯಾದ ವಿರಾಟ್‌, ರನ್‌ ಗಳಿಕೆಗೆ ಸಿಕ್ಸರ್‌ಗಳಿಗಿಂತಲೂ ಫೋರ್‌ಗಳ ಮೇಲೆ ಹೆಚ್ಚು ವಿಶ್ವಾಸ ಇಡುವಂತಹ ಬ್ಯಾಟರ್. ಮುಖ್ಯವಾಗಿ ಇವರ ಕವರ್‌ ಡ್ರೈವ್‌ ಮತ್ತು ಫ್ಲಿಕ್‌ ಹೊಡೆತಗಳನ್ನು ನೋಡುವುದು ಕ್ರಿಕೆಟ್‌ ಪ್ರಿಯರ ಕಣ್ಣಿಗೆ ಹಬ್ಬವೇ ಸರಿ.

2013ನೇ ಇಸವಿಯಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ಮತ್ತು 2018ರಲ್ಲಿ ದೇಶದ ಅತ್ಯುನ್ನತ್ತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಇದರ ಹೊರತಾಗಿ ಐಸಿಸಿ ವರ್ಷದ ಕ್ರಿಕೆಟಿಗ ಸರ್ ಗಾರ್‌ಫೀಲ್ಡ್ ಸೋಬರ್ಸ್ ಟ್ರೋಫಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

2008ರಲ್ಲಿ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗಾಗಲೇ 102 ಪಂದ್ಯಗಳಿಂದ 8,074 ರನ್‌ಗಳನ್ನು ಬಾರಿಸಿ 49.53ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಂಡಿದ್ದು, 12,344 ರನ್‌ಗಳನ್ನು ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ 3932 ರನ್ ಬಾರಿಸಿದ ಕೀರ್ತಿ ಕಿಂಗ್‌ ಕೊಹ್ಲಿ ಅವರದ್ದು. ಟೆಸ್ಟ್‌, ಒಡಿಐ ಮತ್ತು ಟಿ20 ಮೂರೂ ಮಾದರಿಗಳಲ್ಲಿ (49.53 ಟೆಸ್ಟ್‌, 59.07 ಒಡಿಐ, 52.01 ಟಿ20-ಐ) 50ರ ಆಸುಪಾಸು ಬ್ಯಾಟಿಂಗ್‌ ಸರಾಸರಿ ಹೊಂದಿರುವ ಬ್ಯಾಟರ್ ಆಗಿದ್ದಾರೆ.

ವಿರಾಟ್ ಕೊಹ್ಲಿ ದಶಕದಲ್ಲಿ 20 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೊಸ ಇತಿಹಾಸ ಬರೆದಿದ್ದಾರೆ. ಈ ಸಾಧನೆಯೊಂದಿಗೆ ಅವರು ಐಸಿಸಿ ‘ದಶಕದ ಕ್ರಿಕೆಟಿಗ’ ಪ್ರಶಸ್ತಿಗೆ ಭಾಜನರಾದರು. 2016ರ ಐಪಿಎಲ್ ಋತುವಿನಲ್ಲಿ ಬರೋಬ್ಬರಿ 973 ರನ್ ಗಳಿಸಿದ್ದ ಕೊಹ್ಲಿ ಎಲ್ಲರಿಗಿಂತ ಎತ್ತರದಲ್ಲಿ ನಿಂತರು. ಈ ದಾಖಲೆಯು ಐದು ಋತುಗಳವರೆಗೆ ಹಾಗೆಯೇ ಉಳಿದಿದೆ ಎಂಬುದು ವಿಶೇಷ. ಹೀಗೆ ಅನೇಕ ದಾಖಲೆಗಳ ಸರದಾರ ಕಿಂಗ್ ಕೊಹ್ಲಿಗೆ ಡಿಟಿವಿ ಕನ್ನಡ ವೆಬ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!