ಪಂಜಾಬ್: ಕಾಲ್ನಡಿಗೆ ಮೂಲಕ ಪವಿತ್ರ ಹಜ್ಜ್ ಯಾತ್ರೆ ಹೊರಟಿರುವ ಶಿಹಾಬ್ ಚೋಟೂರು ರವರಿಗೆ ಪಾಕಿಸ್ತಾನ ವೀಸಾ ಅರ್ಜಿಯನ್ನು ತಿರಸ್ಕರಿಸಿದೆ ಎಂಬ ಸುದ್ದಿಯೂ ಸುಳ್ಳಾಗಿದ್ದು, ಆ ತರಹದ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ , ಇನ್ನೇನು ಕೆಲವು ದಿನಗಳಲ್ಲಿ ದೆಹಲಿಯ ಯೆಂಬಸ್ಸಿಯಿಂದ ಪತ್ರ ದೊರಕಲಿದ್ದು, ತದ ನಂತರ ಪಾಕಿಸ್ತಾನ ನಮಗೆ ವೀಸಾ ನೀಡಲಿದೆ ಎಂದು ಶಿಹಾಬ್ ಚೋಟುರು ರವರ ಆಪ್ತರು ನೇರ ಡಿ.ಟಿವಿ ಕನ್ನಡಕ್ಕೆ ಸ್ಪಷ್ಟನೆ ನೀಡಿದರು.
ಈ ಬಗ್ಗೆ ಇಂದು ಬೆಳಗ್ಗೆಯಿಂದ ಕೆಲವು ಮಾದ್ಯಮಗಲ್ಲಿ ವಿಸಾ ತಿರಸ್ಕರಿಸಲಾಗಿದೆ ಎಂಬ ಅಡಿಬರಹದಲ್ಲಿ ವಾರ್ತೆಗಳು ಬರುತ್ತಿದ್ದು, ಇದು ಸಂಪೂರ್ಣ ಸುಳ್ಳಾಗಿದೆ, ಯಾರು ಕೂಡ ನಂಬದಿರಿ ಎಂದು ಶಿಹಾಬ್ ಆಪ್ತರು ಡಿ.ಟಿವಿ ಗೆ ಪ್ರತಿಕ್ರಯಿಸಿದ್ದಾರೆ.
ಶಿಹಾಬ್ ರವರಿಗೆ ವಿಸಾ ನೀಡಬೇಕು ಎಂದು ಪಾಕಿಸ್ತಾನ ಪ್ರಜೆಯೊಬ್ಬರು(ವಕೀಲ) ಪಾಕಿಸ್ತಾನ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಅಲ್ಲಿಯ ಹೈಕೋರ್ಟ್ ಶಿಹಾಬ್ ರವರ ಸಂಪೂರ್ಣ ಮಾಹಿತಿ ನೀಡಲು ಹೇಳಿದ್ದರು.
ಆದರೆ ಅವರ ಬಳಿ ಸರಿಯಾದ ಯಾವುದೇ ದಾಖಲೆಗಳಿಲ್ಲದ ಕಾರಣ ಅವರ ಅರ್ಜಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ಅವರಿಗೂ ಶಿಹಾಬ್’ರವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಲಿನ ನ್ಯಾಯಾಲಯ ಸೂಚಿಸಿದೆ.
ಶಿಹಾಬ್ ರವರ ಸಂಪೂರ್ಣ ಮಾಹಿತಿ ನೀಡದ ಕಾರಣ ಪಾಕಿಸ್ತಾನ ಪ್ರಜೆ ನೀಡಿದ ಅರ್ಜಿಯನ್ನು ಅಲ್ಲಿಯ ಕೋರ್ಟ್ ತಿರಸ್ಕರಿಸಿದ ವಾರ್ತೆಯನ್ನು ತಿರುಚಿದ ಕೆಲವೊಂದು ಮಾಧ್ಯಮಗಳು, ವಿಸಾ ತಿರಸ್ಕಾರ ಎಂಬ ಅಡಿಬರಹದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿವೆ ಎಂದು ತಿಳಿದು ಬಂದಿದೆ.
ಶಿಹಾಬ್ ರವರು ಇದುವರೆಗೂ ಯಾವುದೇ ಅರ್ಜಿಯನ್ನು ಕೋರ್ಟ್’ಗೆ ಸಲ್ಲಿಸಿಲ್ಲ. ಶಿಹಾಬ್’ರವರ ಪಾಕಿಸ್ತಾನ ವಿಸಾ ಈಗಾಗಲೇ ಪ್ರಗತಿಯಲ್ಲಿದ್ದು, ಕೆಲವೊಂದು ರಾಜತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ಜೂನ್ 02 ರಂದು ಕೇರಳದ ಮಲಪ್ಪುರಂ ನಿಂದ ಯಾತ್ರೆ ಹೊರಟಿದ್ದ ಶಿಹಾಬ್ ರವರು ಸುಮಾರು 3,000ಕ್ಕೂ ಹೆಚ್ಚು ಕಿ.ಮೀ. ಕಾಲ್ನಡಿಗೆಯ ಮೂಲಕ ವಾಘಾ ಗಡಿ ತಲುಪಿದ್ದರು.ಪಾಕಿಸ್ತಾನ ಎಂಬೆಸಿ ವೀಸಾ ನೀಡುವುದಾಗಿ ಹೇಳಿದ್ದರಿಂದ ಕಳೆದ 2 ತಿಂಗಳಿಂದ ಇಂಡಿಯಾ- ಪಾಕಿಸ್ತಾನ ಗಡಿಯಲ್ಲಿ ಶಿಹಾಬ್’ರವರು ತಂಗಿದ್ದಾರೆ.
ವೀಡಿಯೋ ವೀಕ್ಷಿಸಿ