ಖತರ್: ಇಡೀ ವಿಶ್ವವೇ ಫಿಫಾ ವಲ್ಡ್ ಕಪ್ ನ್ನು ವೀಕ್ಷಿಸುತ್ತಿದ್ದು,ಖತರ್‌ನ ಫಿಫಾ ವರ್ಲ್ಡ್ ಕಪ್ ಮೈದಾನವು ಕೂಡ ಫುಟ್ಬಾಲ್ ಪ್ರಿಯರಿಂದ ತುಂಬಿ ತುಳುಕುತ್ತಿದೆ.
ವಿವಿಧ ರಾಷ್ಟ್ರದ ಲಕ್ಷಾಂತರ ಮಂದಿಗಳು ಫಿಫಾ ಮೈದಾನವನ್ನು ಸೇರಿದ್ದು ಹರ್ಷೋದ್ಗಾರ ಸಂಭ್ರಮಗಳು ಹೆಚ್ಚೇ ಆಗಿವೆ.

ಅದರ ಮದ್ಯದಲ್ಲೂ ಖತರ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಯುವಕನೊಬ್ಬ ತನ್ನ ಪ್ರೀತಿಯ ನಾಯಕ ದಿವಂಗತ ಪುನೀತ್ ರಾಜ್ ಕುಮಾರ್ ರವರ ಫೋಟೋ ಹಿಡಿದು ಅಭಿಮಾನ ಮರೆದಿದ್ದಾನೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದ ಖಾಲಿದ್ ಎಂಬಾತ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಫೋಟೋವನ್ನು ಹಿಡಿದು ಫಿಫಾ ವಿಶ್ವಕಪ್ ನ ಮೈದಾನದಲ್ಲಿ ಸಂತೋಷದಿಂದ ಅಪ್ಪುರವರನ್ನು ಸ್ಮರಿಸಿದ್ದಾನೆ.

ಅಪ್ಪು ಎಂದಿಗೂ ಅಮರ ಪ್ರೀತಿಯ ಅಪ್ಪುರವರ ಫೋಟೋವನ್ನು ಲಕ್ಷಾಂತರ ಮಂದಿ ಸೇರಿದ್ದ ವಿಶ್ವವೇ ನೋಡುತ್ತಿರುವ ಫಿಫಾ ವಲ್ಡ್ ಕಪ್ ಮೈದಾನದಲ್ಲಿ ಅಪ್ಪುರವರ ಭಾವಚಿತ್ರ ಪ್ರದರ್ಶಿಸಿದ್ದು ತುಂಬಾನೇ ಸಂತೋಷ ಉಂಟಾಗಿದೆ ಎಂದು ಅವರು ಡಿಟಿವಿಯ ಜೊತೆ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಅಪ್ಪುರವರ ಭಾವಚಿತ್ರವನ್ನು ಫಿಫಾ ವಲ್ಡ್ ಕಪ್ ಮೈದಾನದಲ್ಲಿ ಪ್ರದರ್ಶಿಸಿದ ಅಪ್ಪು ಅಭಿಮಾನಿಯ ಕಾರ್ಯಕ್ಕೆ ಅಪ್ಪು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂತೋಷ ವ್ಯಕ್ತಪಡಿಸುತ್ತಿರುವುದು ಕೂಡ ಕಂಡು ಬಂದಿದೆ.