';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮುಂಬೈ: ಮಹಿಳೆಯೊಬ್ಬಳ ಮನೆಗೆ ಮೂವರು ವ್ಯಕ್ತಿಗಳು ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ, ನಂತರ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರದ ಮುಂಬೈನ ಕುರ್ಲಾದಲ್ಲಿ ಈ ಘಟನೆ ನಡೆದಿದೆ. 47 ವರ್ಷದ ಮಹಿಳೆಯೊಬ್ಬಳ ಮನೆಗೆ ಏಕಾಏಕಿ ಮೂವರು ಕಾಮುಕರು ನುಗ್ಗಿದ್ದಾರೆ. ಅದಾದ ಬಳಿಕ ಆಕೆಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ನಡೆಸಿದ್ದಾರೆ.
ಆ ನಂತರ ಆಕೆಯ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟಿದ್ದು, ಎದೆ ಹಾಗೂ ಎರಡು ಕೈಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವಿಕೃತಿಯನ್ನು ಮೆರೆದಿದ್ದಾರೆ. ಅದಾದ ಬಳಿಕ ಕಾಮುಕರಲ್ಲಿ ಒಬ್ಬಾತ ಘಟನೆಯನ್ನು ವೀಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಿದ್ದಾನೆ.
ಘಟನೆಗೆ ಸಂಬಂಧಿಸಿ ಮಹಿಳೆಯು ನೆರೆಹೊರೆಯವರ ಸಹಾಯದಿಂದ ಎನ್‍ಜಿಓವೊಂದನ್ನು ಸಂಪರ್ಕಿಸಿದ್ದಾರೆ. ಅದಾದ ಬಳಿಕ ಎನ್‍ಜಿಓ ಸಹಾಯದಿಂದ ಸ್ಥಳೀಯ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ಮೂವರು ಆರೋಪಿಗಳು ಅದೇ ಏರಿಯಾದವರೇ ಆಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.