ಬಂಟ್ವಾಳ,ಡಿಸೆಂಬರ್ 11 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ, ಬದ್ರಿಯಾ ಜುಮಾ ಮಸೀದಿ ಆಲಾಡಿ ಹಾಗೂ ಹೆಲ್ಪ್ ಲೈನ್ ಆಲಾಡಿ ಇದರ ಜಂಟಿ ಆಶ್ರಯದಲ್ಲಿ ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಮರ್ಹೂಂ ಸಿರಾಜ್ ಆಲಾಡಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 11 ಡಿಸೆಂಬರ್ 2022 ನೇ ಆದಿತ್ಯವಾರದಂದು ಬದ್ರಿಯಾ ಜುಮಾ ಮಸೀದಿ ಆಲಾಡಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಜನಾಬ್ : ಸಲೀಂ ಆಲಾಡಿ (ಅದ್ಯಕ್ಷರು,ಜುಮಾ ಮಸೀದಿ ಆಲಾಡಿ) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಬಹು: ಸಲೀಂ ಅರ್ಶದಿ (ಖತೀಬರು,ಜುಮಾ ಮಸೀದಿ ಆಲಾಡಿ) ದುಃವಾಶೀರ್ವಚನ ಹಾಗೂ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಡಾ! ಗ್ಲೋರಿಯಾ ( ಬ್ಲಡ್ ಬ್ಯಾಂಕ್ ಅಧಿಕಾರಿ ಯೇನೆಪೋಯ ಆಸ್ಪತ್ರೆ),ಯೂಸುಫ್ ಶಾರದಾ ನಗರ, ಬಹು:ಅಕ್ಬರ್ ಅಲಿ ಮದನಿ,ರಹಿಮಾನ್ ಉದ್ದೋಟ್ಟು, ನಾಸಿರ್ ಆರ್.ಬಿ (ಕಾರ್ಯನಿರ್ವಾಹಕರು ಬ್ಲಡ್ ಹೆಲ್ಪ್ ಕರ್ನಾಟಕ (ರಿ) ಹಾಗೂ ಜಮಾಹತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅನ್ವರ್ ಬೆಂಕ್ಯ ಸ್ವಾಗತಿಸಿ ನಿರೂಪಿಸಿದರು
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 37 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೇನೆಪೋಯ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.


ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಆಲಾಡಿ ಪರಿಸರದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)