ಕಾಸರಗೋಡು: ಕಳೆದ ದಿನ ಪಲ್ಲಿಕ್ಕರದಲ್ಲಿ ನಾಪತ್ತೆಯಾಗಿದ್ದ ಶಾಲಾ ಬಾಲಕ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಪಲ್ಲಿಕ್ಕರ ಪೂಚಕ್ಕಾಡ್ ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರ ಮುಹಮ್ಮದ್ ಶಹೀಮ್ (10) ಎಂದು ಗುರುತಿಸಲಾಗಿದೆ.
ವಿಧ್ಯಾರ್ಥಿಯಾದ ಶಹೀಮ್ ಬುಧವಾರ ಮಧ್ಯಾಹ್ನ ಶಾಲೆಯಿಂದ ಬಂದವನು ನಂತರ ಕಾಣೆಯಾಗಿದ್ದು ಶಹೀಮ್ ಮನೆಗೆ ಹೋಗುತ್ತಿದ್ದೇನೆ ಎಂದು ಶಿಕ್ಷಕರಿಗೆ ತಿಳಿಸಿದ್ದನು ಎಂದು ತಿಳಿದುಬಂದಿದೆ.
ಶಾಲಾ ಸಮಯದ ನಂತರವೂ ಅವನನ್ನು ನೋಡದ ಕಾರಣ ಕುಟುಂಬ ಸದಸ್ಯರು ವಿಚಾರಿಸಿದಾಗ, ಅವನು ಬೇಗನೆ ಶಾಲೆಯನ್ನು ತೊರೆದಿದ್ದಾನೆ ಎಂದು ತಿಳಿದುಬಂದಿದೆ.ನಂತರ ಸಂಬಂಧಿಕರು ಬೇಕಲ್ ಪೊಲೀಸರಿಗೆ ದೂರು ನೀಡಿದ್ದು, ವಿದ್ಯಾರ್ಥಿಗಾಗಿ ಹುಡುಕಾಟ ನಡೆಯುತಿತ್ತು.
ಬಾಲಕನನ್ನು ಹುಡುಕಲು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಸಹ ಪ್ರಸಾರ ಮಾಡಲಾಗಿತ್ತು.ಸುಮಾರು ರಾತ್ರಿ 8 ಗಂಟೆಗೆ ಸಮಯದಲ್ಲಿ ಹಳಿಗಳ ಮೇಲೆ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟ ರೀತಿಯಲ್ಲಿ ಬಾಲಕ ಮೃತದೇಹ ಪತ್ತೆಯಾಗಿದೆ.
ಶಹೀಂ ಸಂಜೆಯವರೆಗೂ ಬೇಕಲ್ ಬೀಚ್ ಪಾರ್ಕ್ ನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಶಹೀಮ್ ಅವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಪ್ರದೇಶಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದ್ದು ಮನೆಯವರಂತು ದುಃಖದ ಕಡಲಿನಲ್ಲಿ ಮುಳುಗಿದ್ದಾರೆ.