ಪುತ್ತೂರು: ಕುಂಬ್ರ ಜಂಕ್ಷನ್ನಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಆಕ್ಟೀವಾ ಸವಾರರ ವಾಹನ ಜಖಂ ಗೊಂಡಿದ್ದು ಡಿಕ್ಕಿ ಹೊಡೆದ ಬೈಕ್ ಸವಾರ ಪರಾರಿಯಾದ ಘಟನೆ ಇದೀಗ ನಡೆದಿದೆ.

ಬೈಕ್ ಸವಾರ ಪುತ್ತೂರಿನಿಂದ ವೇಗವಾಗಿ ಬರುತ್ತಿದ್ದ ಸಂದರ್ಭ ನಡು ರಸ್ತೆಯಲ್ಲಿ ಕೆಂಪು ಬಣ್ಣದ ಟಾಟ ಸುಮೊವೊಂದು ರಸ್ತೆ ಮಧ್ಯದಲ್ಲಿ ಬೇಕಾ ಬಿಟ್ಟಿ ತಿರುಗಿಸುತ್ತಿದ್ದ ಸಂದರ್ಭ ಕಾರನ್ನು ತಪ್ಪಿಸಲು ನೋಡಿದ ಬೈಕ್ ಸವಾರ ಬೆಳ್ಳಾರೆ ರಸ್ತೆಯಿಂದ ಪುತ್ತೂರು ರಸ್ತೆಗೆ ಬಂದು ಸೇರಿದ್ದ ಶೇಖಮಲೆ ಮದ್ರಸಾ ಅಧ್ಯಾಪಕರ ಆಕ್ಟೀವಾಗೆ ಡಿಕ್ಕಿ ಹೊಡೆದಿದ್ದಾರೆನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಆಕ್ಟೀವಾ ಜಖಂಗೊಂಡಿದ್ದಲ್ಲದೆ ಆಕ್ಟೀವಾ ಸವಾರರಾದ ಉಸ್ಮಾನ್ ಮುಸ್ಲಿಯಾರ್ರವರ ೨೦೦೦೦/- ಬೆಲೆಯ ಹೊಸ ಮೊಬೈಲ್ ಫೋನ್ ಕೂಡ ಛಿದ್ರಗೊಂಡಿದ್ದು ಬೈಕ್ ಸವಾರ ಇದ್ಯಾವುದರ ಗೊಡವೆ ಇಲ್ಲದವರಂತೆ ಪರಾರಿಯಾದ ಘಟನೆ ನಡೆದಿದೆ. ಈಗಾಗಲೇ ಅಪಘಾತ ಸಂಭವಿಸಿದ ಈ ಸ್ಥಳದಲ್ಲಿ ಸಂಪ್ಯ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾ ಇದ್ದು ಮುಂದಿನ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಬಹುದೆಂದು ಸೇರಿದ ಜನರು ಆಡಿಕೊಳ್ಳುತ್ತಿದ್ದು ಹೆಚ್ಚಿನ ಮಾಹಿತಿ ನಿರಿಕ್ಷಿಸಲಾಗಿದೆ.
