ಕಡಬ: ಕಿಲ್ಲರ್ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನಡೆದ ದಕ್ಷಿಣ ಕನ್ನಡದ ಕಡಬದ ಪ್ರದೇಶದಲ್ಲಿ ನಡೆದಿದ್ದು, ನರಹಂತಕ ಕಾಡಾನೆಯನ್ನು ಸೆರೆಯಿಡಿಯುವ “ಅಪರೇಷನ್ ಎಲಿಫೆಂಟ್ “ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದ್ದು, ಇಂದು ಒಂದು ನರಹಂತಹ ಆನೆಯನ್ನು ಸೆರೆ ಹಿಡಿಯಲಾಗಿದೆ.
ಇಂದು ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ಸಮೀಪದ ಮಂಡೆಕರ ಕಾಡಿನಲ್ಲಿ ನರಹಂತಹಕ ಆನೆಯನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಸದ್ಯ ಕಾಡಾನೆ ಸೆರೆಸಿಕ್ಕ ಸ್ಥಳದಲ್ಲಿ ಐದು ಸಾಕಾನೆಗಳು ಬೀಡುಬಿಟ್ಟಿವೆ.
ಇಂದುಅರಣ್ಯ ಇಲಾಖೆ ಮತ್ತು 100 ಕ್ಕೂ ಅಧಿಕ ಸ್ಥಳೀಯರ ತಂಡದಿಂದ ಕಾರ್ಯಾಚರಣೆ ನಡೆದಿತ್ತು. ಸದ್ಯ ಕಾಡಾನೆ ಸೆರೆಸಿಕ್ಕ ಕಾಡಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯಾಚರಣೆ ಆರಂಭವಾಗಿದ್ದು, ಸ್ಥಳಕ್ಕೆ ನೀರಿನ ಟ್ಯಾಂಕರ್, ಕ್ರೇನ್ ರವಾನೆಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಆನೆ ಸೆರೆಸಿಕ್ಕ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಫೆ.20ರಂದು ಕಡಬದ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿತ್ತು.