';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಎಣ್ಣೆ ಸೀಗೇಕಾಯಿ ಸಂಬಂಧ. ಆದರೆ ವೈಯಕ್ತಿಕವಾಗಿ ಅವರಿಬ್ಬರ ಮಧ್ಯೆ ಗೌರವಾದರಗಳಿವೆ.
15 ನೇ ವಿಧಾನಸಭಾ ಅಧಿವೇಶನದ ಕೊನೆಯ ದಿನವಾಗಿದ್ದ ಇಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸದನಕ್ಕೆ ನೀಡಿರುವ ಕೊಡುಗೆಯನ್ನು ಮುಕ್ತಕಂಠದಿಂದ ಕೊಂಡಾಡಿದರು.
ಸಿದ್ದರಾಮಯ್ಯ ದಾಖಲೆಯ 13 ಬಾರಿ ಬಜೆಟ್ ಮಂಡಿಸಿದನ್ನು ಸಹ ಮುಖ್ಯಮಂತ್ರಿಗಳು ಸ್ಮರಿಸಿದರು.
ವಿರೋಧಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರವರ ಅನುಭವಗಳು ಈ ಸದನಕ್ಕೆ ಲಭ್ಯವಾಗಿದೆ. ಅವರ ಅನುಭವದ ಮುಖಾಂತರ ಬಹಳಷ್ಟು ತಿದ್ದುಪಡಿಗಳನ್ನು ಮಾಡಲು ಅವಕಾಶ ಸಿಕ್ಕಿವೆ, ಅವರ ಹಿರಿತನದ ಲಾಭ ಸದನಕ್ಕೆ ಸಿಕ್ಕಿದೆ ಎಂದರು.