dtvkannada

'; } else { echo "Sorry! You are Blocked from seeing the Ads"; } ?>

ತಮಿಳುನಾಡು: ಮಹಿಳೆಯೊರ್ವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಲೈಂಗಿಕ ಕಿರುಕುಳ ನೀಡುವುದಷ್ಟೇ ಅಲ್ಲದೇ ವಿದ್ಯುತ್​ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವಂತಹ ದಾರುಣ ಘಟನೆ ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯ ಮೇಳ ಪಾಳಯಂ ಜಂಕ್ಷನ್​ನಲ್ಲಿ ನಡೆದಿದೆ.

ಮಹಿಳೆ ದೂರಿನನ್ವಯ ಪೊಲೀಸರು ಮೂವರು ಆಟೋಚಾಲಕರಾದ ಶಶಿ, ವಿನೋದ್​, ವಿಜಯಕಾಂತ್​​ರನ್ನು ಬಂಧಿಸಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, 9 ವರ್ಷದ ಮಗುವನ್ನು ಸಹ ಹೊಂದಿದ್ದಾರೆ. ಪ್ರತಿನಿತ್ಯ ಮಹಿಳೆ ಕೆಲಸಕ್ಕೆಂದು ಮಸಾಜ್​ ಸೆಂಟರ್​ಗೆ ಹೋಗುವ ಮಾರ್ಗ ಮಧ್ಯೆ ಮೇಲಪಾಲಯಂ ಜಂಕ್ಷನ್ನಲ್ಲಿ ಆಟೋರಿಕ್ಷಾ ಚಾಲಕರಿಂದ ಪ್ರತಿದಿನ ಕಿರುಕುಳ ಎದುರಿಸುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

'; } else { echo "Sorry! You are Blocked from seeing the Ads"; } ?>

ನಿತ್ಯ ಕಿರುಕುಳ ಅನುಭವಿಸಿದ ಮಹಿಳೆ:
ಪ್ರತಿನಿತ್ಯ ಕಿರುಕುಳ ಮುಂದುವರೆಯುತ್ತಿದ್ದಂತೆ ಮಹಿಳೆ ತನ್ನ ಸುರಕ್ಷತೆಗಾಗಿ ಬ್ಯಾಗ್​ನಲ್ಲಿ ಚಿಲ್ಲಿ ಪೌಡರ್​​ ಮತ್ತು ಪೇಪರ್​ ಪೌಡರ್ ಇಟ್ಟಿಕೊಂಡಿದ್ದಾರೆ. ಎಂದಿನಂತೆ ಕೂಡ ನಿನ್ನೆ ಶುಕ್ರವಾರ(ಮಾ. 10) ಮಹಿಳೆ ಕೆಲಸಕ್ಕೆಂದು ಮೇಳಪಾಲಯಂ ಜಂಕ್ಷನ್​ನಲ್ಲಿ ನಡೆದುಕೊಂಡು ಹೋಗುವಾಗ ಅದೇ ಆಟೋಚಾಲಕರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.

ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ:
ಮಹಿಳೆ ಅವರನ್ನು ಪ್ರಶ್ನಿಸಿದ್ದು, ಆಟೋಚಾಲಕರು ಸಡನ್​ ಆಗಿ ಮಹಿಳೆ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಮಹಿಳೆ ಬ್ಯಾಗ್​ನಲ್ಲಿದ್ದ ಚಿಲ್ಲಿ ಪೌಡರ್​​ ಮತ್ತು ಪೇಪರ್​ ಪೌಡರ್​ನ್ನು ಅವರ ಮೇಲೆ ಎರಚಿದ್ದಾಳೆ. ಮತ್ತಷ್ಟು ಕೋಪಗೊಂಡ ಚಾಲಕರು ಅವಳನ್ನು ಬಲವಂತವಾಗಿ ಹಿಡಿದು, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಸುಮಾರು ಒಂದುವರೆ ಗಂಟೆಗಳ ಕಾಲ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಗಿದ್ದು, ಸಾರ್ವಜನಿಕರು ಯಾರೂ ಕೂಡ ನನ್ನ ರಕ್ಷಣೆಗೆ ಬರಲಿಲ್ಲ. ಆದರೆ ಕೃತ್ಯವನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ದಾಖಲಿಸಿದ್ದಾರೆ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!