dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ಬೆಂಗಳೂರಿನ ಪೂರ್ಣಪ್ರಜ್ಞಾ ಬಡಾವಣೆಯಲ್ಲಿ ವರದಿಯಾಗಿದೆ.

ಪತಿಯೇ ಕೊಲೆಗಾರ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ರಶ್ಮಿ (32) ಮೃತ ಮಹಿಳೆಯಾಗಿದ್ದಾಳೆ. ಮಂಡ್ಯ ಮೂಲದ ರಶ್ಮಿ ಕಳೆದ 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ಮೂಲದ ಅರವಿಂದ್ ಎಂಬಾತನೊಂದಿಗೆ ವಿವಾಹವಾಗಿದ್ದರು.

ದಂಪತಿಗೆ 5 ವರ್ಷದ ಗಂಡು ಮಗು ಇದೆ. ಅರವಿಂದ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ, ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

'; } else { echo "Sorry! You are Blocked from seeing the Ads"; } ?>

ಪತಿಯ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ, ಪತ್ನಿಯ ಕುಟುಂಬಸ್ಥರು ಕೊಲೆ ಆರೋಪ ಹೊರಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!