';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕದ ಬಡ ಟೈಲರ್‌ಗೆ ಕೇರಳ ಲಾಟರಿಯ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ವಾಸವಾಗಿರುವ ನಿವೃತ್ತ ಟೈಲರ್ ಆನಂದ ಅವರಿಗೆ ಕೇರಳದ ಕಾರುಣ್ಯ ಲಾಟರಿ ರೂಪದಲ್ಲಿ ಲಕ್ ಕುದುರಿದೆ. ಉಪ್ಪಿನಂಗಡಿಯಲ್ಲಿ ಟೈಲರ್ ಆಗಿದ್ದ ಆನಂದ್ ಅವರು ಅನಾರೋಗ್ಯದಿಂದ ವೃತ್ತಿ ನಿಲ್ಲಿಸಿದ್ದರು. ಅಪರೂಪಕ್ಕೆ ಕೇರಳಕ್ಕೆ ಹೋದಾಗ ಲಾಟರಿ ಖರೀದಿಸುತ್ತಿದ್ದರು.
ಇದರಂತೆ ನೀಲೇಶ್ವರದಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದಾಗ ಟಿಕೆಟ್ ಖರೀದಿಸಿದ್ದರು. ಈ ಕೇರಳ ರಾಜ್ಯ ಲಾಟರಿಗೆ 80 ಲಕ್ಷ ರೂ. ಮೊದಲ ಬಹುಮಾನವಿತ್ತು. ಎಪ್ರಿಲ್ 15ರಂದು ಡ್ರಾ ಆಗಿತ್ತು.
ಆನಂದ್ ಅವರು ಒಮ್ಮೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಉಪಾಧ್ಯಕ್ಷರೂ ಆಗಿದ್ದರು. ಆರೋಗ್ಯದ ಸಮಸ್ಯೆಯಿಂದ ಟೈಲರ್ ಕೆಲಸ ಬಿಡುವಂತಾಗಿತ್ತು. ಆದರೆ ಇದೀಗ 80 ಲಕ್ಷ ಲಾಟರಿ ಗೆದ್ದಿರುವುದು ಆನಂದ್ ಅವರ ಜೀವನಕ್ಕೆ ಟರ್ನ್ ನೀಡಿದೆ.