dtvkannada

'; } else { echo "Sorry! You are Blocked from seeing the Ads"; } ?>

ಭದ್ರಾವತಿ ನಗರದ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ(ಏ.21) ರಾತ್ರಿ ಯುವಕನ ಬರ್ಬರ ಹತ್ಯೆಯಾಗಿತ್ತು. ಡ್ರ್ಯಾಗನ್​ನಿಂದ ಇರಿದು ಆತನನ್ನ ಕೊಲೆ ಮಾಡಿದ್ದರು. ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯಸಾಯಿನಗರದ ಕೋಡಿಹಳ್ಳಿಯ ನವೀನ್ (28) ಎಂಬ ಯುವಕನೇ ಹತ್ಯೆಯಾದ ವ್ಯಕ್ತಿ.

ಕೊಲೆಯಾದ ನವೀನ್, ಸಾದತ್ ಮತ್ತು ಸುಹೇಲ್​ ಎಂಬುವವರಿಗೆ ಮೊಬೈಲ್ ಸೇಲ್ ಮಾಡಿದ್ದ. ಆದರೆ ಅದರ ​ಬಾಕಿ ಹಣ ನವೀನ್​ಗೆ ಬಂದಿರಲಿಲ್ಲ. ಇನ್ನೂ ಎರಡು ಸಾವಿರ ರೂಪಾಯಿ ಹಣ ಬಾಕಿ ಬರಬೇಕಿತ್ತು. ಅದನ್ನ ನವೀನ್ ಕೇಳಲು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ನವೀನ್ ಬಳಿ ಒಂದು ಡ್ರ್ಯಾಗನ್ ಇತ್ತು. ನವೀನ್ ಎಲ್ಲಿ ಡ್ರ್ಯಾಗನ್​ನಿಂದ ಅಟ್ಯಾಕ್ ಮಾಡುತ್ತಾನೆ ಎನ್ನುವ ಆತಂಕದಲ್ಲಿದ್ದ ಸಾದತ್ ಮತ್ತು ಸುಹೇಲ್ ಅಲರ್ಟ್ ಆಗಿ, ಯುವಕರ ನಡುವೆ ಗಲಾಟೆ ವಿಕೋಪಕ್ಕೆ ಹೋಗಿ, ನವೀನ್ ಮೇಲೆ ಸಾದತ್ ಮತ್ತು ಸುಹೇಲ್ ದಾಳಿ ಮಾಡಿದ್ದಾರೆ. ಬಳಿಕ ನವೀನ್ ದಾಳಿಯಲ್ಲಿ ತೀವ್ರವಾಗಿ ಗಾಯೊಂಡಿದ್ದನು. ಭದ್ರಾವತಿಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದನು.

'; } else { echo "Sorry! You are Blocked from seeing the Ads"; } ?>

ಮೊದಲೇ ಚುನಾವಣೆಯ ಬಿಸಿ ನಡುವೆ ಇಂದು(ಏ.22) ರಂಜಾನ್ ಹಬ್ಬದ ಸಂಭ್ರಮ. ಚುನಾವಣೆಯ ಕಾವು ಸದ್ಯ ಮಲೆನಾಡಿನಲ್ಲಿ ಜಾಸ್ತಿಯಾಗಿದೆ. ಈ ನಡುವೆ ಓರ್ವ ಹಿಂದೂ ಯುವಕನ ಕೊಲೆಯ ಸುದ್ದಿಯು ನಗರದಲ್ಲಿ ಕೆಲ ಹೊತ್ತು ಆಂತಕ ಸೃಷ್ಟಿ ಮಾಡಿತ್ತು. ಮತ್ತೆ ಎಲ್ಲಿ ಕೋಮುಗಲಭೆ ನಡೆಯುತ್ತದೆ ಎಂದು ಖುದ್ದಾಗಿ ಎಸ್ಪಿ ಮಿಥುನ್ ಕುಮಾರ್ ಭದ್ರಾವತಿಗೆ ಭೇಟಿ ನೀಡಿದ್ದರು. ಎಸ್ಪಿ ಎಲ್ಲ ಮುಂಜಾಗೃತೆಯನ್ನು ವಹಿಸಿದ್ದರು. ಭದ್ರಾವತಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಈ ಪ್ರಕರಣ ನಡೆದು ಕೆಲವೇ ಗಂಟೆಯಲ್ಲಿ ಪೊಲೀಸರು ನಾಲ್ವರು ಹಂತಕರನ್ನ ಹೆಡಿಮುರಿಕೊಟ್ಟಿದ್ದಾರೆ. ಹೌದು ಸಾದತ್, ಸುಹೇಲ್, ಜಾವೀದ್ ಮತ್ತು ಫರ್ವೇಜ್ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

ಭದ್ರಾವತಿಯಲ್ಲಿ ಹೆಚ್ಚಾದ ಗಾಂಜಾ ಹಾವಳಿ:
ಭದ್ರಾವತಿಯಲ್ಲಿ ಗಾಂಜಾ ಹಾವಳಿ ಜೋರಾಗಿದೆ. ಈ ನಡುವೆ ನವೀನ್ ಮೊಬೈಲ್ ಮಾರಾಟದ ವ್ಯವಹಾರ ಮಾಡಿ ಇಕ್ಕಟ್ಟಿಗೆ ಸಿಲುಕೊಂಡಿದ್ದನು. ಮೊಬೈಲ್ ಮಾರಾಟ ಮಾಡಿದ ನವೀನ್ ಬಾಕಿ ಹಣ ಪಡೆಯಲು ಹೋಗಿ ಇಲ್ಲಿ ಸಾವಿನ ಮನೆ ಸೇರಿದ್ದಾನೆ. ಇತನ ಹತ್ಯೆ ಮಾಡಿದ್ದು ನಾಲ್ವರು ಅನ್ಯಕೋಮಿನವರು ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಭದ್ರಾವತಿಯ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಆಕ್ಟೀವ್ ಆಗಿದ್ದವು.

ಈ ನಡುವೆ ಕೊಲೆಯ ಸುದ್ದಿ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜಮಾವಣೆ ಶುರುವಾಗಿತ್ತು. ಈ ನಡುವೆ ಎಸ್ಪಿಯು ಖುದ್ದಾಗಿ ಭದ್ರಾವತಿಯಲ್ಲಿದ್ದು, ಘಟನೆಯ ಪಿನ್ ಟು ಪಿನ್ ಮಾಹಿತಿಯನ್ನು ಬಿಜೆಪಿ ಮತ್ತು ಹಿಂದೂಪರ ಸಂಘಟನಗಳಿಗೆ ಎಸ್ಪಿ ಮಿಥುನ್ ಕುಮಾರ್ ಮವನರಿಕೆ ಮಾಡಿದ್ದರು. ಇದರ ಬಳಿಕ ಪರಿಸ್ಥಿತಿಯು ತಿಳಿಯಾಗುತ್ತದೆ.

ಒಂದು ವೇಳೆ ಪೊಲೀಸರು ಸ್ವಲ್ಪ ನಿರ್ಲಕ್ಷ್ಯತೆ ಮಾಡಿದ್ದರು ಮತ್ತೆ ಭದ್ರಾವತಿಯಲ್ಲಿ ಕೋಮುಗಲಭೆ ಕಿಚ್ಚು ಹೊತ್ತಿಕೊಳ್ಳುತ್ತಿತ್ತು. ಕೊಲೆಯ ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಇಂದು ಮೃತನ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಹೋಗಿ ಕುಟುಂಬಸ್ಥರು ಮತ್ತು ಸಂಬಧಿಕರು ಅಂತ್ಯಕ್ರಿಯೆ ಮಾಡಿದ್ದಾರೆ. ಈ ನಡುವೆ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೃತನ ಅಂತ್ಯಕ್ರಿಯೆ ನಡೆದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ನವೀನ್ಗೆ ಒಂದೂವರೆ ವರ್ಷದ ಮಗುವಿದೆ. ಈ ನಡುವೆ ಇತ್ತೀಚೆಗಷ್ಟೇ ಮದುವೆಯಾಗಿದ್ದ ನವೀನ್ ಸಾವು, ಪತ್ನಿಗೆ ದೊಡ್ಡ ಆಘಾತ ತಂದಿದೆ. ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮೃತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!