';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬ್ರಹ್ಮಾವರ: ದೋಣಿ ಮಗುಚಿ ನಾಲ್ವರು ಯುವಕರು ಮೃತಪಟ್ಚ ಹೃದಯವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.
ಒಟ್ಟು 7 ಮಂದಿ ಯುವಕರು ದೋಣಿಯಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ.
ಮೃತ ಯುವಕರನ್ನು ಹೂಡೆ ನಿವಾಸಿ ಟೈಲರ್ ಫಾರೂಕ್ ಪುತ್ರ ಫೈಝಾನ್ ಹಾಗೂ ಅವರ ಸಹೋದರಿಯ ಪುತ್ರ ಇಬಾದ್ ಹಾಗೂ ಇವರ ಸಬಂಧಿ ಶೃಂಗೇರಿ ಮೂಲದ ಸುಫಾನ್, ಫರ್ಹಾನ್ ಎಂದು ಗುರುತಿಸಲಾಗಿದೆ.
ರಂಝಾನ್ ಹಿನ್ನೆಲೆಯಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅಲ್ಲಿಂದ ಒಟ್ಟು ಏಳು ಮಂದಿ ವಾಯು ವಿಹಾರಕ್ಕೆಂದು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ನಡೆದಿದೆ ಎಂದು ವರದಿಯಾಗಿದೆ.
ದೋಣಿ ಮಗುಚಿದಾಗ 7 ಮಂದಿಯಲ್ಲಿ ಮೂವರು ಈಜಿ ಕೊಂಡು ದಡ ಸೇರಿಕೊಂಡಿದ್ದಾರೆ. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.