dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ವಿಧಾನಸಭಾ ಚುನಾವಣೆ ನಂತರ ಇಂದು ಬೆಳಗ್ಗೆ ಬಸ್ ಕೊರತೆಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಉಪ್ಪಿನಂಗಡಿ ಬಸ್ ನಿಲ್ದಾನದಿಂದ ಇಂದು ಬೆಳಗ್ಗಿನಿಂದ ಸಾರಿಗೆ ಬಸ್‌ಗಳು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಸಂಚರಿಸದೇ ಇರುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸಿದರು.

'; } else { echo "Sorry! You are Blocked from seeing the Ads"; } ?>

ಇಲ್ಲಿ ಖಾಸಗಿ ಬಸ್‌ಗಳು ಇವೆಯಾದರೂ, ಬಹುತೇಕರು ಕೆಎಸ್‌ ಆರ್‌ಟಿಸಿ ಬಸ್‌ಗಳನ್ನೇ ನಂಬಿದ್ದಾರೆ. ಈಗಿರುವಾಗ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ಮಂಗಳೂರು ಕಡೆ ಹೊರಡುವ ಎಲ್ಲರೂ ಪರದಾಡುವಂತಾಯಿತು. ಬೆಳಗ್ಗೆ 07:00am ಗಂಟೆಗೆ ಬಂದ ವಿದ್ಯಾರ್ಥಿಗಳು 9:00am ಗಂಟೆಯವರೆಗೂ ಬಸ್ಸಿಗಾಗಿ ಪರದಾಡುವ ಸ್ಥಿತಿ ಕಂಡು ಬಂತು.

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ಪ್ರತಿನಿತ್ಯ ಒಡಾಡುವ ಬಸ್ಸುಗಳನ್ನೇ ಚುನಾವಣ ಕರ್ತವ್ಯಕ್ಕೆ ಬಿಡಲಾಗಿದೆ ಇದರಿಂದ ನಾವು ಶಾಲಾ-ಕಾಲೇಜು-ಮನೆಗೆ ವಾಪಸ್‌ ಹೋಗಲಾರದೆ ಪರದಾಡುತ್ತಿದ್ದೇವೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!