';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ವಿಧಾನಸಭಾ ಚುನಾವಣೆ ನಂತರ ಇಂದು ಬೆಳಗ್ಗೆ ಬಸ್ ಕೊರತೆಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಉಪ್ಪಿನಂಗಡಿ ಬಸ್ ನಿಲ್ದಾನದಿಂದ ಇಂದು ಬೆಳಗ್ಗಿನಿಂದ ಸಾರಿಗೆ ಬಸ್ಗಳು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಸಂಚರಿಸದೇ ಇರುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸಿದರು.
ಇಲ್ಲಿ ಖಾಸಗಿ ಬಸ್ಗಳು ಇವೆಯಾದರೂ, ಬಹುತೇಕರು ಕೆಎಸ್ ಆರ್ಟಿಸಿ ಬಸ್ಗಳನ್ನೇ ನಂಬಿದ್ದಾರೆ. ಈಗಿರುವಾಗ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ಮಂಗಳೂರು ಕಡೆ ಹೊರಡುವ ಎಲ್ಲರೂ ಪರದಾಡುವಂತಾಯಿತು. ಬೆಳಗ್ಗೆ 07:00am ಗಂಟೆಗೆ ಬಂದ ವಿದ್ಯಾರ್ಥಿಗಳು 9:00am ಗಂಟೆಯವರೆಗೂ ಬಸ್ಸಿಗಾಗಿ ಪರದಾಡುವ ಸ್ಥಿತಿ ಕಂಡು ಬಂತು.
ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ಪ್ರತಿನಿತ್ಯ ಒಡಾಡುವ ಬಸ್ಸುಗಳನ್ನೇ ಚುನಾವಣ ಕರ್ತವ್ಯಕ್ಕೆ ಬಿಡಲಾಗಿದೆ ಇದರಿಂದ ನಾವು ಶಾಲಾ-ಕಾಲೇಜು-ಮನೆಗೆ ವಾಪಸ್ ಹೋಗಲಾರದೆ ಪರದಾಡುತ್ತಿದ್ದೇವೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.