ಕರ್ನಾಟಕ: ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಮುಖ್ಯಮಂತ್ರಿ ಯಾರೆಂದು ಅಂತಿಮವಾಗಿಲ್ಲ ಅವರವರ ಒಳಗೆ ಜಗಳನಡೆಯುತ್ತಿದೆ,ಪೈಪೋಟಿಯಲ್ಲಿದೆ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಬರಹಗಳು ಪೊಷ್ಟರ್‌ಗಳು ವೈರಲಾಗುತ್ತಿದೆ.

ಇಬ್ಬರೂ ನಾಯಕರು ಅರಿಯದ ವಿಚಾರ,ಮಾತನಾಡಿದ ವಿಚಾರಗಳನ್ನು ತಿರುಚಿಕೊಂಡು ಪ್ರಚಾರಪಡಿಸಿ ಜನರ ದಾರಿ ತಪ್ಪಿಸುತ್ತಿದ್ದ ಒಂದಷ್ಟು ನ್ಯಾಷನಲ್ ಚಾನೆಲ್‌ಗಳಿಗೆ ಇದಿಗ ಡಿಕೆಶಿ ತಕ್ಕ ಉತ್ತರ ನೀಡಿದ್ದಾರೆ.


ಹೌದು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಫಿಕ್ಸ್ ಆಗಿದ್ದು ಮುಖ್ಯಮಂತ್ರಿ ಪಟ್ಟದಲ್ಲಿ ಯಾವುದೇ ಚರ್ಚೆ ಮತ್ತು ಬದಲಾವಣೆಗಳಿಲ್ಲ ಎಂದು ತಿಳಿದು ಬಂದಿದ್ದು ಪಕ್ಷದ ಆಂತರಿಕ ವಿಚಾರಗಳು, ಜನರಿಗೆ ಕೊಟ್ಟ ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ನಾಯಕತ್ವಕ್ಕಾಗಿ ಅಲ್ಲ ಎಂದು ಡಿಕೆಶಿ ಸ್ಪಷ್ಟನೆಯನ್ನು ನೀಡುವ ಮೂಲಕ ಕಾಂಗ್ರೆಸ್ ಒಗ್ಗಟ್ಟನ್ನು ಮತ್ತೆ ಎತ್ತಿ ಹಿಡಿದಿದ್ದಾರೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಸಿದ್ದರಾಮಯ್ಯರವರನ್ನು ಅಂತಿಮಗೊಳಿಸಿದ್ದು ಪ್ರಮಾಣ ವಚನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆಂದು ವರದಿಯಾಗಿದೆ.