ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಆರ್ಬಿಐ ಆದೇಶಿಸಿದೆ.
ಬ್ಯಾಂಕ್ಗಳಲ್ಲಿ 2000 ರೂ. ನೋಟ್ ಬದಲಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆಯನ್ನು ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್ಬಿಐ ಹೇಳಿದೆ.
ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ ನೀಡಿದೆ. ಗ್ರಾಹಕರು ಕೂಡ ಆತಂಕ ಪಡುವ ಅಗತ್ಯವಿಲ್ಲ, ನೋಟು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ.
‘ನರೇಂದ್ರ ಮೋದಿ ಅವರಿಂದ ಮತ್ತೊಂದು ನೋಟ್ ಬ್ಯಾನ್. ತನ್ನದೇ ನೀತಿಗಳ ಬಗ್ಗೆ ಸ್ವತಃ ಬಿಜೆಪಿ ಸರ್ಕಾರಕ್ಕೆ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ನೋಟುಗಳನ್ನು ಬ್ಯಾನ್ ಮಾಡುವುದೇ ನಿಮ್ಮ ಯೋಜನೆಯಾಗಿದ್ದರೆ, 2016ರಲ್ಲಿ 2 ಸಾವಿರ ರೂಪಾಯಿ ನೋಟುಗಳನ್ನು ಪರಿಚಯಿಸಿದ್ದೇಕೆ? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ’ ಎಂದು ಕರ್ನಾಟಕದ ನಿಯೋಜಿತ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.