ಪುತ್ತೂರು : ರಾಜ್ಯದ್ಯಂತ ಸುದ್ದಿ ಮಾಡಿದ ಪುತ್ತೂರು ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸರ ದೌರ್ಜನ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು ಇದೀಗ ದೌರ್ಜನ್ಯದಿಂದ ಗಂಭೀರವಾಗಿದ್ದ ಯುವಕನೋರ್ವನ ಕಿವಿಯ ತಮಟೆ ಹರಿದು ಹೋಗಿದ್ದಾಗಿ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಉಲ್ಲೇಖಗೊಂಡಿದ್ದು ಪ್ರಕರಣವನ್ನು ಮತ್ತಷ್ಟು ಗಂಭೀರತೆಯನ್ನು ಕೊಂಡೊಯ್ದಿದೆ.

ವಿಷಯ ಅರಿತ ಬೆನ್ನಲ್ಲೇ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಸ್ಪಿ ಭೇಟಿಯಾಗಿ ಡಿವೈಎಸ್ಪಿಯನ್ನು ಅಮಾನತುಗೊಳಿಸಿ ೫ ಲಕ್ಷ ಪರಿಹಾರ ನೀಡದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 11 ರಷ್ಟು ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸರು ಕಸ್ಟಡಿಯಲ್ಲಿ ಆರೋಪಿಗಳಿಗೆ ಗಂಭೀರ ಮಟ್ಟದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇತ್ತೀಚಿಗೆ ಈ ವಿಚಾರ ರಾಜ್ಯ ಮಟ್ಟದಲ್ಲೇ ಬಾರೀ ಸುದ್ದಿ ಮಾಡಿತ್ತು.
ಇದೀಗ ಆರೋಪಿಯ ಬಗ್ಗೆ ವೈದ್ಯಕೀಯ ರಿಪೋರ್ಟ್ ಈ ರೀತಿಯಾಗಿ ಹೊರಬಂದಿದ್ದು ಪ್ರಕರಣವು ಗಂಭೀರದತ್ತ ಸಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.