ಉಪ್ಪಿನಂಗಡಿ: ತೆಕ್ಕಾರು ಪಂಚಾಯತ್ ಸಿಬ್ಬಂದಿಗಳ ಮೇಲೆ ಪಂಚಾಯತ್ ಸದಸ್ಯೆ ನಡೆಸಿದ ಹಲ್ಲೆ ಪ್ರಕಾರಣ ಹೊಸ ತಿರುವು ಪಡೆದಿದ್ದು ಇದೀಗ ಸಂತ್ರಸ್ತರ ವಿರುದ್ಧವೇ ಆರೋಪಿಗಳು ಜಾತಿ ನಿಂದನೆ ಕೇಸು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತನಕ ತೆಕ್ಕಾರು ಪಂಚಾಯತ್ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟಿಸಲು ಸಿದ್ದರಾಗಿದ್ದಾರೆ.
ಇನ್ನು ತೆಕ್ಕಾರು ಪಂಚಾಯತ್ ಕಚೇರಿಯ ಸೇವೆ ಸ್ಥಗಿತಗೊಳಿಸಿ E.O ಮುಕಾಂತರ ಮನವಿ ಸಲ್ಲಿಸಲಿದ್ದಾರೆ.
ಈ ಮೂಲಕ ಪರಿಹಾರ ಸಿಗದಿದ್ದಲ್ಲಿ ರಾಜ್ಯದ ಎಲ್ಲಾ ನೌಕರರನ್ನು ಸೇರಿಸಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಹೆಚ್ಚಿದೆ.
ಇನ್ನು ಸಿಬ್ಬಂದಿಗಳ ಮೇಲೆ ಮಾಡಿದ ಸುಳ್ಳು ಕೇಸುಗಳನ್ನು ತಕ್ಷಣವೇ ಹಿಂಪಡೆಯ ಬೇಕು.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಲ್ಲಿಯವರೆಗೆ ಪಂಚಾಯತ್ ಕಚೇರಿಗೆ ಸಂಬಂದಿಸಿದ ಸಾರ್ವಜನಿಕ ಯಾವುದೇ ಕೆಲಸ ಕಾರ್ಯಗಳನ್ನು ನಡೆಸದೇ ಪ್ರತಿಭಟಿಸಲಿದ್ದೇವೆ ಎಂದು ತೆಕ್ಕಾರು ಪಂಚಾಯತ್ ಸಿಬ್ಬಂದಿಗಳು ಹೇಳಿದ್ದಾರೆ.
ತಮ್ಮ ಕಚೇರಿಯ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿಗಳು ಇವತ್ತಿನಿಂದ ಪ್ರತಿಭಟನೆಗೆ ಕೂರಲಿದ್ದಾರೆ.
ಈ ನಿಟ್ಟಿನಲ್ಲಿ ಇವತ್ತಿನಿಂದ ತೆಕ್ಕಾರು ಪಂಚಾಯತ್ ಕಚೇರಿ ಸೇವೆಗಳು ಸಾರ್ವಜನಿಕರಿಗೆ ಸಿಗುವುದು ಕಷ್ಟ ಸಾಧ್ಯ.