dtvkannada

'; } else { echo "Sorry! You are Blocked from seeing the Ads"; } ?>

ಕಣ್ಣಂಚಲ್ಲಿ ನೀರಿನ ಹನಿಗಳು, ಕಣ್ಣುಗಳು ಮಂಜಾಗುತ್ತಿದೆ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಸಂಕಟ, ಅಳು ಎಲ್ಲವೂ ಒಟ್ಟೊಟ್ಟಿಗೆ ಬರುತ್ತಿದೆ. ಮಗನನ್ನು ಕಳೆದುಕೊಂಡ ತಂದೆಯ ಪಾಡು ಹೇಳತೀರದು. ಒಡಿಶಾ ರೈಲು ದುರಂತದಲ್ಲಿ ಮಗನನ್ನು ಕಳೆದುಕೊಂಡ ತಂದೆಯು ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ನಾವು ಚಿಕ್ಕವರಿದ್ದಾಗ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಕಳೆದುಕೊಂಡಾಗ ಇಡೀ ಮನೆಯನ್ನೇ ಹುಡುಕುವಂತೆ, ಯಾವುದೋ ಶುಭ ಸಮಾರಂಭಗಳಿಗೆ ಹೊರಟು ನಿಂತಾಗ ಬೀರುವಿನಿಂದ ಬಟ್ಟೆಯನ್ನು ಕಿತ್ತು ಕೆಳಗೆ ಹಾಕುವಂತೆ ಈ ತಂದೆಯೊಬ್ಬರು ಶವದ ರಾಶಿಯಲ್ಲಿ ತನ್ನ ಮಗನಿದ್ದಾನೆಯೇ ಎಂದು ಹುಡುಕಾಡುತ್ತಿದ್ದಾರೆ.

ಒಡಿಶಾದಲ್ಲಿ ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತದೇಹವನ್ನು ಮುಚ್ಚಿದ ಮುಸುಕು ತೆಗೆದು ತೆಗೆದು ಹುಡುಕಿತ್ತಿದ್ದಾರೆ. ಈ ರೀತಿ ಸಾವು ಘನಗೋರವಾಗಿ, ಹೃದಯವಿದ್ರಾವಕವಾಗಿ ಅಂತ್ಯ ಆಗಬಾರದು ಎಂದೆಲ್ಲಾ ನಾವು ಹೇಳಿ ಬಿಡಬಹುದು. ಆದರೆ ಯಾರ ಬದುಕಿನ ಅಂತ್ಯ ಹೇಗೆ ಹೇಗೆ ಇರುತ್ತದೊ ಯಾರಿಗೂ ಗೊತ್ತಿಲ್ಲ.

'; } else { echo "Sorry! You are Blocked from seeing the Ads"; } ?>
https://twitter.com/ppm_444_/status/1664926773098737669?s=20

ಮೂಲಗಳ ಪ್ರಕಾರ ರೈಲು ದುರಂತದ ನಂತರ ಕಾಣೆಯಾಗಿದ್ದ ಮಗ ಶವವಾಗಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಚಿತ್ರ👇🏻

ಘಟನೆ ಏನು? ಶುಕ್ರವಾರ ಸಂಜೆ ಸರಿಸುಮಾರು 7 ಗಂಟೆಗೆ ನಡೆದ ಆಘಾತಕಾರಿ ಘಟನೆಯಲ್ಲಿ, 12841 ಶಾಲಿಮಾರ್-ಕೋರೊಮಂಡಲ್ ಎಕ್ಸ್‌ಪ್ರೆಸ್ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಭೀಕರ ಘಟನೆಯಲ್ಲಿ ಸುಮಾರು 300 ಜೀವಗಳು ಬಲಿಯಾಗಿವೆ, ಸುಮಾರು 900 ಜನರು ಗಾಯಗೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಬಹನಾಗಾ ಬಜಾರ್‌ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ. ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ.

ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ. ಒಡಿಶಾದ ಬಾಲಸೋರ್‌ ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಮೂರು ರೈಲುಗಳ ಅಪಘಾತದಲ್ಲಿ ಸುಮಾರು 260ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, ಸಾವಿರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಏಕಾಏಕಿ ಮೂರು ರೈಲು ಡಿಕ್ಕಿ ಹೇಗಾಯಿತು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.

ಆರಂಭದಲ್ಲಿ ಕೋರಮಂಡಲ್‌ ಶಾಲಿಮಾರ್‌ ಎಕ್ಸ್‌ ಪ್ರೆಸ್‌ ರೈಲು ಒಡಿಶಾದ ಬಾಲಸೋರ್‌ ನಲ್ಲಿ ಹಳಿ ತಪ್ಪಿದ್ದ ಪರಿಣಾಮ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆಯಲ್ಲೇ ಯಶವಂತಪುರ್-ಹೌರಾ ಸೂಪರ್‌ ಫಾಸ್ಟ್‌ ರೈಲು ಹಳಿತಪ್ಪಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವೇ ನಿಮಿಷಗಳಲ್ಲಿ ನಿದ್ದೆಯಲ್ಲಿದ್ದ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು.

ಒಡಿಶಾ ರೈಲು ದುರಂತಕ್ಕೆ ಪ್ರಮುಖ ವಾಗಿ ಎರಡು ಕಾರಣಗಳಿವೆ. ಮೊದಲ ಮಾನವ ದೋಷ ಮತ್ತು ಎರಡನೇ ತಾಂತ್ರಿಕ ದೋಷ. ಈ ಅಪಘಾತದ ಹಿಂದೆ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. ಸಿಗ್ನಲ್ ದೋಷದಿಂದ ಒಂದೇ ಹಳಿಯಲ್ಲಿ ಎರಡು ರೈಲುಗಳು ಬಂದು ಡಿಕ್ಕಿ ಹೊಡೆದಿವೆ ಎಂದು ವರದಿಯಾಗುತ್ತಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!