ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ ಎಂಬ ಘೋಷಣೆಯ ‘ಶಕ್ತಿ’ ಯೋಜನೆ ಜಾರಿಗೆ ಬಂದಿದ್ದು, ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಸರ್ಕಾರಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಓಡಾಡುವ ಸರ್ಕಾರಿ ಬಸ್ ಗಳು ಹೌಸ್ ಫುಲ್ ಆಗಿವೆ.
ಫ್ರೀ ಟಿಕೆಟ್ ಹಿನ್ನೆಲೆಯಲ್ಲಿ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಇನ್ನೊಂದೆಡೆ ನಿತ್ಯ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಪರದಾಡಿರುವ ವಿಡಿಯೋಗಳು ಹರಿದಾಡುತ್ತಿವೆ. ಇದರ ಮಧ್ಯೆ ಬಸ್ ನಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದರಿಂದ ಕಂಡಕ್ಟರ್ ಸಹ ಪರದಾಡುವಂತಾಗಿದೆ.
ಹೌದು.. ಬಸ್ನಲ್ಲಿ ಮಹಿಳೆಯರೇ ತುಂಬಿಕೊಂಡಿದ್ದರಿಂದ ನಿರ್ವಾಹಕರು ಟಿಕೆಟ್ ನೀಡಲು ಹರಸಾಹಸಪಡುವಂತಾಗಿದೆ. ಬಸ್ ಹತ್ತಿದವರಿಗೆ ಟಿಕೆಟ್ ನೀಡುವ ಸಲುವಾಗಿ ಕಂಡಕ್ಟರ್ ಸೀಟ್ ಮೇಲೆ ಹತ್ತಿ ಕುಳಿತ್ತಿದ್ದಾರೆ. ಅಫಜಲಪುರ to ಬ್ಯಾಡಗಿ ಬಸ್ನ ಕಂಡಕ್ಟರ್, ಸೀಟ್ ಮೇಲೆ ಕುಳಿತುಕೊಂಡು ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.