dtvkannada

'; } else { echo "Sorry! You are Blocked from seeing the Ads"; } ?>

ಲಾಡ್ಜಿಗೆ ಬಾಡಿಗೆ ನೀಡಲು ಹಣವಿಲ್ಲದೇ ಕರೆದುಕೊಂಡು ಹೋದ ವಿದ್ಯಾರ್ಥಿನಿಯ ಲ್ಯಾಪ್‌ಟಾಪ್ ಅಡವಿಟ್ಟ ಶೋಕಿರಾಜ

ಎಚ್ಚರ ಎಚ್ಚರ,, ನಿಮ್ಮ ಮನೆಯಲ್ಲಿ ವಿದ್ಯಾರ್ಥಿಗಳು ಇನ್ಷಟಾಗ್ರಾಂ ಬಳಸುತ್ತಿದ್ದರೆ ಹೆತ್ತವರೇ ಅತ್ತ ಗಮನವಿರಲಿ

ಮಂಗಳೂರು: ಸಾಮಾಜಿಕ ಜಾಲ ತಾಣಗಳಲ್ಲಿ ಒಂದಾದ ಇನ್‌ಷ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಯನ್ನು ಪ್ರೀತಿಯ ನಾಟಕವಾಡಿ 20 ದಿನಗಳ ಕಾಲ ನಗರದ ಲಾಡ್ಜ್ ನಲ್ಲಿರಿಸಿ ನಿರಂತರ ಅತ್ಯಾಚಾರ ನಡೆಸಿದ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಡಬದ ಆರೋಪಿಯನ್ನು ಬಂಧಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಕಡಬ ಮೂಲದ ಅನೀಶ್ ರೆಹಮಾನ್(29) ಬಂಧಿತ ಆರೋಪಿಯಾಗಿದ್ದಾನೆ.ಇನ್ಷಟಾಗ್ರಾಂ ಮೂಲಕ ಬಂಟ್ವಾಳದ ಯುವತಿಗೆ ಯುವಕನ ಪರಿಚಯವಾಗಿತ್ತು.

ಮದುವೆಯಾಗುವುದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ ನಡೆಸಿ ಮೇ.28ರಿಂದ ಮಂಗಳೂರಿನ ಹೆಸರಾಂತ ಹೊಟೇಲ್ ನಲ್ಲಿ ರೂಂ ಮಾಡಿ 20 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾಗಿ ಯುವತಿ ದೂರು ನೀಡಿದ್ದಾಳೆ.

ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದ 24 ವರ್ಷದ ಯುವತಿಯೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಬಂಟ್ವಾಳದಿಂದ ಮಂಗಳೂರಿಗೆ ವ್ಯಾಸಂಗಕ್ಕೆ ಬಂದು ಹೋಗುತ್ತಿದ್ದಳು ಎನ್ನಲಾಗಿದೆ.

ಈ ಸಂದರ್ಭ ಆಕೆಯೊಂದಿಗೆ ಸಲುಗೆ ನಡೆಸಿ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ರೂಮ್ ಮಾಡಿ 20 ದಿನ ನಿರಂತರ ಅತ್ಯಾಚಾರ ಮಾಡಿದ್ದಾನೆ.ಬಳಿಕ ಹೋಟೇಲ್ ನಲ್ಲಿ ಬಿಲ್ ನೀಡದೆ ತಪ್ಪಿಸಲು ನೋಡಿದಾಗ ಸಿಬ್ಬಂದಿ ಹಿಡಿದು ಹಾಕಿದ್ದಾರೆ.

ಬಳಿಕ ಯುವತಿಯ ಲ್ಯಾಪ್‌ಟಾಪ್‌ ಅನ್ನು ಅಡವಿಟ್ಟು ಹೊರಬಂದಿದ್ದ ಎನ್ನಲಾಗಿದ್ದು ಲ್ಯಾಪ್‌ಟಾಪ್ ಕಾಣದಾಗಿದ್ದರಿಂದ ಯುವತಿ ಬಳಿ ಮನೆಯವರು ವಿಚಾರಿಸಿ ಮನೆಯವರು ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಆತನಿಗೆ ಮದುವೆಯಾಗಿರುವ ವಿಷಯ ತಿಳಿದುಬಂದಿತ್ತು.

ಬಳಿಕ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿ IPC SEC 417, 376 ಮತ್ತು 506 ಅನ್ವಯ ಪ್ರಕರಣ ದಾಖಿಲು ಮಾಡಿದ್ದಾರೆ.ಆರೋಪಿ ಅನೀಶ್ ವಿರುದ್ಧ ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಬಂಧಿತವಾಗಿದ್ದು ಕಾವೂರು ಠಾಣೆಯಲ್ಲಿ ಪ್ರಕರಣ ಎದುರಿಸುತ್ತಿದ್ದಾನೆ.

ಸಾಲ ಮಾಡಿ ಶೋಕಿ ಜೀವನ- ಆರೋಪಿ ಅನೀಶ್ ರೆಹಮಾನ್ ಹಲವು ವಿದ್ಯಾರ್ಥಿನಿಯರನ್ನು ತನ್ನ ಮೋಹದ ಬಲಿಗೆ ಬೀಳಿಸಿ ಅತ್ಯಾಚಾರ ಮಾಡಿರುವುದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರೊಂದಿಗೆ ಸ್ನೇಹ ಬೆಳೆಸಿ ತನ್ನ ಬಣ್ಣದ ಮಾತುಗಳಿಂದ ಬಲೆಗೆ ಹಾಕಿಕೊಳ್ಳುತ್ತಿದ್ದ, ಬಳಿಕ ಯುವತಿಯರಿಂದಲೇ ಸಾಲ ಮಾಡಿಸಿ ಆ ಹಣದಿಂದ ಶೋಕಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.

ಅವರನ್ನು ನಗರದ ಐಷಾರಾಮಿ ಹೊಟೆಲುಗಳಿಗೆ ಕರೆದುಕೊಂಡು ಹೋಗಿ ರೂಂ ಬುಕ್ ಮಾಡುತ್ತಿದ್ದ ಮತ್ತು ದೂರು ನೀಡಿದ ವಿದ್ಯಾರ್ಥಿನಿಯಿಂದಲೇ 1.5 ಲಕ್ಷ ರೂಪಾಯಿಗಳ ಸಾಲ ಮಾಡಿಸಿದ್ದಾನೆ ಈ ಅಸಮಿ ಎಂದು ತಿಳಿದು ಬಂದಿದೆ.

ಇವನ ಈ ಶೋಕಿ ಜೀವನ ನೋಡಿ ಹುಡುಗಿಯರು ಮರುಳಾಗಿ ಸುಲಭವಾಗಿ ಬಲೆಗೆ ಬೀಳುತ್ತಿದ್ದರು ಬಳಿಕ ಯುವತಿಯರಿಂದಲೇ ರೂಂ ಬಾಡಿಗೆ ಕೊಡಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ.

ಆದರೆ ಈ ಬಾರಿ ಆತನ ಲಕ್ ಕೈಕೊಟ್ಟಿತ್ತು, ರೂಂ ಬಾಡಿಗೆ ನೀಡದೇ ಪರಾರಿಯಾಗಲು ಪ್ಲಾನ್ ಮಾಡುವಾಗಲೇ ಹೊಟೇಲ್ ಸಿಬಂದಿಗೆ ಗೊತ್ತಾಗಿ ಪ್ಲಾನ್ ಪ್ಲಾಪ್ ಆಗಿ ಕಂಬಿ ಎಣಿಸಬೇಕಾಯಿತು ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!