dtvkannada

'; } else { echo "Sorry! You are Blocked from seeing the Ads"; } ?>

ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತೇಲಂಗಾರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿ. ಈತ ಕೆಲವು ವರ್ಷಗಳ ಹಿಂದೆ ಪದವಿ ಮುಗಿಸಿದ್ದರೂ, ಓದಿಗೆ ತಕ್ಕ ಹಾಗೆ ಕೆಲಸ ಸಿಕ್ಕಿಲ್ಲ. ಇದರಿಂದ ಮದುವೆಯಾಗಲು ಹೆಣ್ಣು ಕೂಡ ಸಿಗುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಮನನೊಂದಿದ್ದ ಯುವಕ, ಖಿನ್ನತೆಗೆ ಒಳಗಾಗಿ ಇದೀಗ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

'; } else { echo "Sorry! You are Blocked from seeing the Ads"; } ?>

ಕೃಷಿ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದ ಮೃತ ಯುವಕ ನಾಗರಾಜ್:
ಇನ್ನು ಮೃತ ನಾಗರಾಜ ಉದ್ಯೋಗಕ್ಕಾಗಿ ಅಲೆದು ಸುಸ್ತಾಗಿ ಹೋಗಿದ್ದ. ಎಷ್ಟೇ ಅಲೆದರೂ ಉದ್ಯೋಗ ದೊರೆತಿರಲಿಲ್ಲ. ಇದಾದ ಮೇಲೆ ಕೃಷಿ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದ. ಈ ಎಲ್ಲಾ ಚಿಂತೆಗಳ ಮಧ್ಯೆ ಇತ್ತಿಚೆಗೆ ಆತನಿಗೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ. ಈ ಎಲ್ಲಾ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಆತ ಮನೆಯ ಸಮೀಪದಲ್ಲಿರುವ ಗುಡ್ಡಕ್ಕೆ ಹೋಗಿ, ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!