dtvkannada

'; } else { echo "Sorry! You are Blocked from seeing the Ads"; } ?>

ನವದೆಹಲಿ: ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಲು ಭಾರತವು ಬಾಹುಬಲಿ ರಾಕೆಟ್‌ ಎಲ್‌ವಿಎಂ3- ಎಂ4 ಮೂಲಕ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಯಿತು.

ಆ ಮೂಲಕ ಇಸ್ರೋಗೆ (ISRO) ಮತ್ತೊಂದು ಗರಿ ಸಿಕ್ಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌ (ವಿಕ್ರಮ್‌), ರೋವರ್‌ (ಪ್ರಜ್ಞಾನ) ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಿತು

ಮಧ್ಯಾಹ್ನ 2:35 ನಿಮಿಷಕ್ಕೆ ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡಿತು.ಭಾರತದ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಸಾಗಿದೆ.

ಈ ಕಾರ್ಯಾಚರಣೆಯು ಯಶಸ್ವಿಯಾದರೆ, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಿ ಭಾರತ ಹೆಸರಾಗಲಿದೆ.

ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಮಾರ್ಕ್-3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಇದೆ.ಗಗನನೌಕೆಯು ಭೂಮಿಯಿಂದ ಚಂದ್ರನೆಡೆಗೆ ತಲುಪಲು ಸುಮಾರು 40 ದಿನ ತೆಗೆದುಕೊಳ್ಳುತ್ತದೆ. ಆರೀತಿ ನೋಡಿದ್ದಲ್ಲಿ ಆ. 23 ರಂದು ಚಂದ್ರನಲ್ಲಿ ಇಳಿಯಲಿದೆ ಎಂದು ನಿರೀಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!