';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹಾಸನ: ಟಿಪ್ಪರ್ ವಾಹನ ಡಿಕ್ಕಿಯಾಗಿ ಇನೋವಾ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ದಾರುಣ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ನಡೆದಿದೆ.
ಕುಪ್ಪಳ್ಳಿ ಗ್ರಾಮದ ಚೇತನ್, ಗುಡ್ಡೇನಹಳ್ಳಿ ಗ್ರಾಮದ ಅಶೋಕ್, ತಟ್ಟೆಕೆರೆ ಗ್ರಾಮದ ಪುರುಷೋತ್ತಮ ಹಾಗೂ ಆಲೂರು ತಾಲ್ಲೂಕಿನ ಚಿಗಳೂರು ಗ್ರಾಮದ ದಿನೇಶ್ ಮೃತರು. ಸದ್ಯ ಮೃತದೇಹಗಳನ್ನು ಆಲೂರಿನ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನೋವಾ ಕಾರಿನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಈ ವೇಳೆ ಹಾಸನ ಕಡೆಯಿಂದ ಆಗಮಿಸುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸದ್ಯ ಮೃತಪಟ್ಟವರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.