ಮಂಗಳೂರು: ಬಜರಂಗದಳದ ಕಾರ್ಯಕರ್ತರ ಗಡೀಪಾರು ಮಾಡುವ ಮೂಲಕ ಬಜರಂಗದಳವನ್ನು ಮಟ್ಟ ಹಾಕ್ತೇವೆನ್ನುವುದು ಭಾವಿಸಿದ್ರೆ ಅದು ಭ್ರಮೆ ಎಂದು ಬಜರಂಗದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಗುಡುಗಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರೀಯಿಸಿದ ಪುನೀತ್ ಅತ್ತಾವರ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುವ ಹೇಳಿಕೆ ನೀಡಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳ ದಮನ ಕಾರ್ಯ ಶುರುವಾಗಿದೆ.
ಇದಕ್ಕೆ ಪೂರಕ ಎಂಬಂತೆ ಮೂವರು ಬಜರಂಗಳದ ಕಾರ್ಯಕರ್ತರನ್ನು ಗಡೀಪಾರು ಮಾಡುತ್ತೇವೆ ಎಂದು ಪೊಲೀಸ್ ಇಲಾಖೆ ಮೂಲಕ ಸರಕಾರ ನೊಟೀಸ್ ನೀಡಿದೆ.
ಸರಕಾರ ಪೊಲೀಸ್ ಇಲಾಖೆ ಮೂಲಕ ಬಜರಂಗದಳದ ಕಾರ್ಯಕರ್ತರನ್ನು ನಿಯಂತ್ರಿಸಲು ಮುಂದಾಗುತ್ತಿದ್ದಾರೆ.ರಾಜಕೀಯ ತುಷ್ಟೀಕರಣ, ಮುಸ್ಲಿಮರನ್ನು ಖುಷಿಪಡಿಸಲು ಇವರು ಮುಂದಾಗಿದ್ದಾರೆ. ಕೇಸುಗಳನ್ನು ಹಾಕಿಸಿ ನಮ್ಮ ಕಾರ್ಯಕರ್ತರ ಕೆಲಸಗಳಿಗೆ ಅಡ್ಡಿ ಪಡಿಸಬೇಕೆಂದು ತೀರ್ಮಾನಿಸಿದ್ದರೆ ಅದು ನಿಮ್ಮ ಭ್ರಮೆ ಎಂದರು.
ನಮ್ಮ ಕಾರ್ಯಕರ್ತರು ಗೋವಿನ ರಕ್ಷಣೆ, ಲವ್ ಜಿಹಾದ್‌ನಲ್ಲಿ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆಗೋಸ್ಕರ, ಸಮಾಜದಲ್ಲಿ ಆಗುವ ಹಿಂದು ವಿರೋಧಿ ಕೃತ್ಯಗಳ ವಿರುದ್ಧ ಹೋರಾಟ ನಡೆಸಿದ್ದೇವೆ.ನಮ್ಮಲ್ಲಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಕೇವಲ ಮೂವರು ಕಾರ್ಯಕರ್ತರನ್ನು ಗಡೀಪಾರು ಮಾಡಿದರೆ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಮುಸ್ಲಿಮರ ಮತ ಪಡೆಯಲು ಹಿಂದು ಕಾರ್ಯಕರ್ತರನ್ನು ಗಡೀಪಾರು ಮಾಡುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಲು ಮುಂದಾಗುವುದಾದರೆ ನಮ್ಮಲ್ಲಿ ಇರುವ ಸಾವಿರಾರು ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ ಎಂದರು.ಸರಕಾರ ಹಿಂದು-ಮುಸ್ಲಿಂ ಬೇಧವಿಲ್ಲದೇ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಬೇಕು.
ಬಜರಂಗದಳದ ಕಾರ್ಯಕರ್ತರನ್ನು ಕಾನೂನು ಪ್ರಕಾರ ದಮನಿಸಲು ಮುಂದಾದರೆ ಸರಕಾರದ ವಿರುದ್ಧ, ಪೊಲೀಸ್ ಇಲಾಖೆ ವಿರುದ್ಧವೂ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.ಗೋವಿನ ರಕ್ಷಣೆಗಾಗಿ ನಾವು ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ. ಇದುವರೆಗೆ ನಾವು ಪೊಲೀಸರಿಗೆ ಮಾಹಿತಿ ನೀಡಿ ಅದನ್ನು ತಡೆಹಿಡಿಯುವ ಕೆಲಸ ಮಾಡಿದ್ದೇವೆ.
ಆದರೆ ಇಷ್ಟು ಮಾಡಿ ನಮ್ಮ ವಿರುದ್ದವೇ ಪೊಲೀಸರು ಕ್ರಮ ಜರುಗಿಸುವುದಾದರೆ ನಾವು ಅವರಿಗೆ ಮಾಹಿತಿ ಏಕೆ ನೀಡಬೇಕು ಎಂದು ಪ್ರಶ್ನಿಸಿದ ಪುನೀತ್ ಬಜರಂಗದಳದ ಕಾರ್ಯಕರ್ತರಿಗೆ ನೊಟೀಸ್ ನೀಡಿ ಗಡಿಪಾರು ಮಾಡುವ ಮುನ್ನ ಪೊಲೀಸ್ ಇಲಾಖೆ ಈ ಬಗ್ಗೆ ನೂರು ಬಾರಿ ಯೋಚಿಸುವುದು ಒಳ್ಳೆಯದು ಎಂದು ಗುಡುಗಿದ್ದಾರೆ.