ಉಪ್ಪಿನಂಗಡಿ: ಇಂದು ನಡೆದ ಕೋಡಿಂಬಾಡಿ ಗ್ರಾ.ಪಂ.ನ ಎರಡನೇ ಅವಧಿಯ ಅಧಿಕಾರದ ಚುಣಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಲ್ಲಿಕಾ ಅಶೋಕ್ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಯಪ್ರಕಾಶ್ ಬದಿನಾರು ಆಯ್ಕೆಯಾದ ಬಗ್ಗೆ ವರದಿಯಾಗಿದೆ.

ಈಗಾಗಲೇ 11 ಸದಸ್ಯ ಬಲವನ್ನು ಹೊಂದಿರುವ ಗ್ರಾ.ಪಂ. ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (A) ಮೀಸಲಾತಿ ಬಂದಿದ್ದು ಇಲ್ಲಿನ 11 ಮಂದಿ ಸದಸ್ಯರಲ್ಲಿ ಆರು ಮಂದಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು, ಐದು ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದರು.

ಇಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಉಷಾ ಲಕ್ಷ್ಮಣ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಲ್ಲಿಕಾ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ರಾಮಚಂದ್ರ ಪೂಜಾರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್ ಬದಿನಾರು ನಾಮಪತ್ರ ಸಲ್ಲಿಸಿದ್ದರು.
ಚುಣಾವಣೆಯಲ್ಲಿ ಬಿಜೆಪಿಯ ಒರ್ವ ಸದಸ್ಯೆ ಕಾಂಗ್ರೆಸ್ ಕಡೆ ಮುಖ ಮಾಡುವುದರೊಂದಿಗೆ ಬಿಜೆಪಿಯ ಭದ್ರ ಕೋಟೆಯನ್ನು ನಾಯಕರ ಸಲಹೆಯಂತೆ ಆಪರೇಶನ್ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಪಡೆದುಕೊಂಡಿದೆ.