ಪುತ್ತೂರು: ಅಂಗಡಿಯಿಂದ ಯಾವುದೇ ಸಾಮಾನು ತರುವುದಾದರೆ ಅಂಗಡಿಯವ ಡೋರ್ ನಂಬರ್ ಕೇಳುವುದಿಲ್ಲ, ಆರ್ಟಿಸಿ ಕೇಳುವುದಿಲ್ಲ, ರೇಶನ್ ಕಾರ್ಡು ಕೂಡಾ ಬೇಕಾಗಿಲ್ಲ ದುಡ್ಡು ಕೊಟ್ರೆ ಯಾವ ಅಂಗಡಿಯವರು ಬೇಕಾದ್ರೂ ಸಾಮಾನು ಕೊಡ್ತಾರೆ ಅದೇ ರೀತಿ ಕುಡಿಯುವ ನೀರನ್ನು ಗ್ರಾಪಂ ಮನೆ ಇದ್ದವರಿಗೆ ಕಡ್ಡಾಯವಾಗಿ ಕೊಡಬೇಕು ಯಾವುದೇ ದಾಖಲೆಗಳನ್ನು ಕೇಳಲೇ ಬಾರದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಗ್ರಾಪಂ ಪಿಡಿಓಗಳಿಗೆ ಸೂಚನೆಯನ್ನು ನೀಡಿದ್ದಾರೆ


ನೀರು ಎಲ್ಲರಿಗೂ ಬೇಕು, ನೀರು ಇಲ್ಲದೇ ಇದ್ದರೆ ಬದುಕಲು ಸಾಧ್ಯವಿಲ್ಲ. ಬಡವರು ಮನೆ ಕಟ್ಟಿಕೊಂಡಿರುತ್ತಾರೆ, ಮನೆಗೆ ಡೋರ್ ನಂಬರ್ ಆಗಿರುವುದಿಲ್ಲ ಅಂಥವರಿಗೆ ನೀರು ಕೊಡಲು ಕೆಲವು ಗ್ರಾಪಂ ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆ ಇದು ಸರಿಯಲ್ಲ ವಾಸ್ತವ್ಯದ ಮನೆ ಇದ್ದವರಿಗೆ ಮಾನವೀಯತೆ ನೆಲೆಯಲ್ಲೇ ನೀರು ಕೊಡಲೇಬೇಕು ಇಲ್ಲವಾದರೆ ನಾನು ಈ ವಿಚಾರದಲ್ಲಿ ಕೈ ಹಾಕಬೇಕಾಗುತ್ತದೆ ಎಂದು ಹೇಳಿದರು. ಕುಡಿಯುವ ನೀರು ಕೊಡುವಲ್ಲಿ ಯಾವ ಕಾನೂನನ್ನು ನೋಡಬೇಡಿ, ಮಾನವೀಯತೆ ನೆಲೆಯಲ್ಲಿ ಕೊಡಿ ಅದೇ ರೀತಿ ಕರೆಂಟ್ ಕೂಡಾ ಸಂಪರ್ಕ ನೀಡಬೇಕು ಎಂದು ಮೆಸ್ಕಾಂಗೆ ಸೂಚನೆಯನ್ನು ನೀಡಿದ್ದಾರೆ.