ಉಪ್ಪಿನಂಗಡಿ: ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಅಂಬೇಡ್ಕರ್ ಭವನಕ್ಕಾಗಿ ಕಾದಿರಿಸಿದ ಸ್ಥಳವನ್ನು ಖಾಸಗಿಯೊಬ್ಬರು ವಶಪಡಿಸಿದನ್ನು ಖಂಡಿಸಿ ಅಂಬೇಡ್ಕರ್ ದಲಿತ ಸಂಘರ್ಷ ವತಿಯಿಂದ ಬೃಹತ್ ಪ್ರತಿಭಟನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮುಂಬಾಗ ನಡೆಯಿತು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಂಬೇಡ್ಕರ್ ವಾದ ಮುಖಂಡ ದಲಿತರ ನೋವುಗಳಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ.ಈಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭವನಕ್ಕಾಗಿ ಕಾದಿರಿಸಿದ ಜಾಗವನ್ನು ಯಾವೋನೋ ಒಬ್ಬ ವಶಪಡಿಸಿಕೊಂಡು ಕೃಷಿ ನಡೆಸುತ್ತಿದ್ದು ಅಕ್ಷಮ್ಯ ಸದ್ರಿ ಘಟನೆಯನ್ನು ಖಂಡಿಸುತ್ತಿದ್ದೇವೆ.
ಹೋರಾಟ ಪ್ರತಿರೂಪ ಪಡೆಯುವ ಮುಂಚೆ ಸಮಸ್ಯೆ ಇತ್ಯರ್ಥಗೊಳಿಸಲಿ ಎಂದು ಅವರು ತಹಸೀಲ್ದಾರ್ ರನ್ನು ಒತ್ತಾಯಿಸಿದರು.ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಈ ಬಗ್ಗೆ ಕಂದಾಯ ಇಲಾಖೆಗೆ ತಕ್ಷಣವೇ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ನೆಕ್ಕಿಲಾಡಿ ಪಂಚಾಯತ್ ಅಧ್ಯಕ್ಷರು ಸುಜಾತಾ ರೈ ನಾವು ಎಂದಿಗೂ ಜನರ ಜೊತೆಗಿದ್ದೇವೆ.ಜನರ ನೋವುಗಳಿಗೆ ಖಂಡಿತಾ ಸ್ಪಂದಿಸುತ್ತೇವೆ ಎಂದು ಅವರು ಹೇಳಿದರು.
ಸುಡುಬಿಸಿಲಿನಲ್ಲೂ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿದ್ದು.
ತಹಸೀಲ್ದಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇನ್ನು ಬೇರೆ ಸಭೆಯಲ್ಲಿರುವುದರಿಂದ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದಾಗ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದು ತಹಸೀಲ್ದಾರ್ ಬಾರದೇ ಸ್ಥಳದಿಂದ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೂ ಸ್ಥಳಕ್ಕೆ ಎ.ಸಿ ಮತ್ತು ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಮನವೊಲಿಕೆ ನಡೆಸಿದ್ದಾದರೂ ಜಗ್ಗದ ಪ್ರತಿಭಟನಾಕಾರರು ನ್ಯಾಯ ಸಿಗುವವರೆಗೂ ಇಲ್ಲೆ ಇರುತ್ತೇವೆ ಎಂದು ಘೋಷಣೆ ಕೂಗಿದರು.ಇನ್ನು ಪ್ರತಿಭಟನಾಕಾರರನ್ನು ಮನವೊಲಿಸಿದ ವಿ.ಎ ಈ ಬಗ್ಗೆ ಬುಧವಾರವೆ ಜಾಗವನ್ನು ಅಳತೆ ಮಾಡಿ ಆ ಸ್ಥಳದ ಬಗ್ಗೆ ನಿಮಗೆ ಖಂಡಿತಾ ನ್ಯಾಯ ಕೊಡುತ್ತೇವೆ.
ಈಗಾಗಲೇ ಆ ಸ್ಥಳದಲ್ಲಿ ನಡೆಯುತ್ತಿದ್ದ ಕೃಷಿ ಕಾರ್ಯಗಳಿಗೆ ಸ್ಟೇ ತಂದಿದ್ದೇವೆ.ಇಷ್ಟೊಂದು ಜನರ ಬೆಂಬಲ ಇರುವಾಗ ಆ ಸ್ಥಳವನ್ನು ಖಂಡಿತಾ ತಿರುಗಿ ದೊರಕುವ ಹಾಗೆ ಮಾಡುತ್ತೇವೆ ನೀವು ಇವಾಗ ಈ ಪ್ರತಿಭಟನೆಯ ಕೈ ಬಿಡಿ ಎಂದು ಮನವೋಲಿಸಿದರು.
ಇನ್ನು ಬಾಯಿ ಮಾತಿನ ಭರವಸೆಗೆ ಜಗ್ಗದ ಹೋರಾಟಗಾರರು ಲಿಖಿತ ರೂಪದಲ್ಲಿ ನೀಡಿ ಎಂದು ಕೊರಿಕೊಂಡರು ಲಿಖಿತ ರೂಪದಲ್ಲಿ ವಿ.ಎ ಕೈಯಿಂದ ಮನವಿ ಸಿಕ್ಕಿದ ನಂತರವೇ ಪ್ರತಿಭಟನೆಯನ್ನು ಕೈ ಬಿಟ್ಟರು.ಪ್ರತಿಭಟನೆಯಲ್ಲಿ ನೆಕ್ಕಿಲಾಡಿ ವ್ಯಾಪ್ತಿಯ ನೂರಾರು ಜನರು ಬಾಗವಹಿಸಿದ್ದರು.