ಪುತ್ತೂರು: ನಗರದ ಮುರದಲ್ಲಿ ಬೈಕ್ ಮತ್ತು ಆಕ್ಟೀವಾ ನಡುವೆ ಅಪಘಾತ ಸಂಭವಿಸಿದ್ದು ಸವಾರರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಕಬಕದ ಕಡೆಯಿಂದ ಬರುತ್ತಿದ್ದ ಡ್ಯೂಕ್ ಬೈಕ್ ಮತ್ತು ಆಕ್ಟೀವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಎರಡು ವಾಹನ ಜಖಂ ಗೊಂಡಿದ್ದು ಸ್ಥಳದಲ್ಲಿ ಸಾರ್ವಜನಿಕರು ಸೇರಿಕೊಂಡಿದ್ದು ಆಕ್ಟೀವಾ ಸವಾರರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಅದೇ ರೀತಿ ಬೈಕ್ ಸವಾರನಿಗೂ ಕೈ ಫ್ಯಾಕ್ಚರ್ ಆದ ಬಗ್ಗೆ ಮಾಹಿತಿ ಬಂದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.