ಪುತ್ತೂರು: ಮರೀಲ್ ಬೆದ್ರಾಳದ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಎರಡು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಕ್ವೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಬಾಗದಿಂದ ಹಠಾತ್ತಾಗಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿದ ಇನ್ನೋವಾ ಕಾರು ಚಾಲಕ ಆದಷ್ಟು ರಸ್ತೆ ಬದಿಯಲ್ಲಿರುವ ಸೇಫ್ ರೂಟಿಗೆ ಕಾರನ್ನು ಚಲಾಯಿಸಿದ್ದು ಈ ಕಾರಣ ಎರಡು ಕಾರಿನಲ್ಲಿದ್ದವರು ಸೇಫ್ ಆಗಿದ್ದಾರೆ ಎನ್ನಲಾಗಿದೆ.
ಸೇಫ್ ರೂಟಿಗೆ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಕೆಂಪು ಕಲ್ಲಿನ ಕಟ್ಟೆಗೆ ಇನ್ನೋವಾ ಕಾರು ಬಡಿದಿದ್ದು ಈ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದ್ದು ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಫೋರ್ಡ್ ಕಾರು ಕೂಡ ಅಲ್ಪ ಸ್ವಲ್ಪ ಜಖಂಗೊಂಡಿದೆ ಎನ್ನಲಾಗಿದೆ.
ಇನ್ನೋವಾ ಕಾರಿನಲ್ಲಿ ಕಾಂಗ್ರೆಸ್ ನಾಯಕ ಹೇಮನಾಥ ಶೆಟ್ಟಿ ಹಾಗೂ ಅವರ ಬಳಗ ಸಂಚರಿಸುತ್ತಿದ್ದು ತನ್ನ ಕಾರು ಚಾಲಕನ ಎಚ್ಚರಿಕೆ ಮತ್ತು ಜಾಣ್ಮತನದ ಡ್ರೈವಿಂಗಿನಿಂದಾಗಿ ಶೆಟ್ಟಿ ಮತ್ತು ಬಳಗ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.