ಹೈದರಾಬಾದ್: ರಸ್ತೆಬದಿಯ ಐಸ್ ಕ್ರೀಮ್ ಮಾರಾಟಗಾರನೊಬ್ಬ ಅಸಭ್ಯವಾಗಿ ವರ್ತಿಸಿದ ರೀತಿಗೆ ಪೊಲೀಸರ ಅತಿಥಿಯಾಗಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

ಕೆಲವರಿಗೆ ರಸ್ತೆಬದಿಯಲ್ಲಿ ಐಸ್ ಕ್ರೀಮ್ ಸೇವಿಸುವ ಆಸೆಗಳಿರುತ್ತದೆ. ಐಸ್ ಕ್ರೀಮ್ ಅಥವಾ ಫಾಲೋದವನ್ನು ರಸ್ತೆಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸೇವಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡಿದ್ದನ್ನು ನೋಡಿದರೆ ಖಂಡಿತವಾಗಿಯೂ ಇನ್ಮುಂದೆ ರಸ್ತೆ ಬದಿಯ ಕ್ರೀಮ್ ನ್ನು ಸೇವಿಸುವಾಗ ನೂರು ಬಾರಿ ಯೋಚನೆ ಮಾಡುತ್ತೀರಿ. ಮೊದಲೊಮ್ಮೆ ವೀಡಿಯೋ ನೋಡಾ ಕೊಳ್ಳಿ..👇🏻
ಕಲುರಾಮ್ ಕುರ್ಬಿಯಾ ಎನ್ನುವ ರಾಜಸ್ಥಾನ ಮೂಲದ ವ್ಯಕ್ತಿ ನೆಕ್ಕೊಂಡದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಾನೆ. ಈತ ಮಾರಾಟ ಮಾಡುವ ಐಸ್ ಕ್ರೀಮ್ ಗೆ ತನ್ನ ವೀರ್ಯವನ್ನು ಹಾಕಿದ್ದಾನೆ.
ಹೌದು ಕೇಳಿದರೆ ಅಸಹ್ಯವಾದರೂ, ಈ ಕೃತ್ಯ ನಡೆದಿರುವುದು ಮೊಬೈಲ್ ನಲ್ಲಿ ಸೆರೆಯಾಗಿದೆ. ಐಸ್ ಕ್ರೀಮ್ ನ್ನು ಹಿಡಿದುಕೊಂಡು ಕಲುರಾಮ್ ಹಸ್ತಮೈಥುನ ಮಾಡುತ್ತಾ, ವೀರ್ಯವನ್ನು ಐಸ್ ಕ್ರೀಮ್ ಗೆ ಹಾಕಿದ್ದಾನೆ.
ನಗರದ ಅಂಬೇಡ್ಕರ್ ಸೆಂಟರ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕಲುರಾಮ್ ಕುರ್ಬಿಯಾ ಬಂಧಿಸಿ ತನಿಖೆ ಮಾಡಿದ್ದಾರೆ
ವಿಡಿಯೋ ಆಕ್ರೋಶಕ್ಕೆ ಕಾರಣವಾದ ನಂತರ ಆಹಾರ ನಿರೀಕ್ಷಕರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆಶ್ಲೀಲ ಕೃತ್ಯಗಳಿಗಾಗಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 ರ ಅಡಿಯಲ್ಲಿ ಕುರ್ಬಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ವಿಡಿಯೋದಲ್ಲಿ ಕಂಡುಬರುವ ಕೃತ್ಯದ ನಿಖರ ಸ್ವರೂಪವನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ ಆದರೆ ಇದು ಅನುಚಿತ ವರ್ತನೆಯನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಕೃಪೆ: ಉದಯವಾಣಿ ಪತ್ರಿಕೆಯಿಂದ