ಬೆಳ್ಳಾರೆ: ಬೆಳ್ಳಾರೆಯ ಪೆರುವಾಜೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಳ್ಳಾರೆ ಸಮೀಪದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಉಮಿಕ್ಕಳ ನಿವಾಸಿ ಹತ್ತನೇ ತರಗತಿ ವಿಧ್ಯಾರ್ಥಿ ಮಹಮ್ಮದ್ ರಾಝಿಕ್(16) ಎಂದು ಗುರುತಿಸಲಾಗಿದೆ.
ಕುಂಡಡ್ಕದಿಂದ ಬೆಳ್ಳಾರೆ ಹೋಗಿ ತರಕಾರಿ ಹಣ್ಣು ಹಂಪಲು ಖರೀದಿ ಮಾಡಿ ಮತ್ತೆ ಕುಂಡಡ್ಕಕ್ಕೆ ತಿರುಗಿ ಬರುತ್ತಿದ್ದ ಸಂದರ್ಭ ಹಠಾತ್ತಾಗಿ ಕಾಡುಹಂದಿಗಳ ಗುಂಪೊಂದು ರಸ್ತೆ ದಾಟಿದ್ದು ಇದನ್ನು ಕಂಡ ಸವಾರ ಬ್ರೇಕ್ ಹಾಕಿದ ಸಂದರ್ಭ ರಸ್ತೆ ಬದಿಯಲ್ಲಿದ್ದ ಮರಕ್ಕೆ ಆಕ್ಟೀವಾ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರನ ತಲೆ ಮರಕ್ಕೆ ಬಡಿದು ಗಂಭೀರ ಗಾಯಗೊಂಡಿದ್ದರು.
ಅದೇ ರಸ್ತೆಯಲ್ಲಿ ಬರುತ್ತಿದ್ದ ಯುವಕರು ತಕ್ಷಣ ಆಸ್ಪತ್ರೆಗೆ ಕರೆ ತಂದರಾದರು ದರ್ಬೆ ತಲುಪುವ ಹೊತ್ತಿಗೆ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ತಿಳಿದು ಬಂದಿದೆ.
ಯುವಕನು ಉಮಿಕ್ಕಳ ಟಿಂಬರ್ ರಝಾಕ್ ಅವರ ಮಗನಾಗಿದ್ದು ಮಯ್ಯತ್ ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದ್ದು ಆಸ್ಪತ್ರೆಯ ಬಳಿ ನೂರಾರು ಸಾರ್ವಜನಿಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ.